ಉಜಿರೆ ದೇಶಿಕೇಂದ್ರ ವಿದ್ಯಾಲಯದ ವಾರ್ಷಿಕೋತ್ಸವ

0

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ (ರಿ) ವತಿಯಿಂದ ಉಜಿರೆಯಲ್ಲಿ ನಡೆಯುತ್ತಿರುವ ದೇಶಿಕೇಂದ್ರ ವಿದ್ಯಾಲಯದ ವಾರ್ಷಿಕೊತ್ಸವವು ಮಾ 13 ರಂದು ಉಜಿರೆ ಎಸ್ ಡಿ ಎಂ ವಸತಿ ಪ.ಪೂ.ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ|ಟಿ. ಕೃಷ್ಣಮೂರ್ತಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಎಳೆಯ ಮಕ್ಕಳಿಗೆ ಗುರು ಹಿರಿಯರಿಗೆ ನಮಸ್ಕರಿಸಿ,ಗೌರವಿಸುವ ಉತ್ತಮ ಸಂಸ್ಕಾರವನ್ನು ಶಾಲೆಯಲ್ಲಿ ಕಲಿಸಿಕೊಡಬೇಕು.

ಸಂಸ್ಕೃತ ಶ್ಲೋಕಗಳು, ನೀತಿಬೋಧಕಕಥೆಗಳು ಪೌರಾಣಿಕ ಪಾತ್ರಗಳ ವಿ ಶೇಷ ಸಾಧನೆಗಳು ಎಳೆಯ ಮಕ್ಕಳಿಗೆ ಕಲಿಸುವುದರಿಂದ ಅದು ಅವರಿಗೆ ದಾರಿದೀಪವಾಗಿ ಚಿತ್ತಭಿತ್ತಿಯಲ್ಲಿ ಶಾಶ್ವತವಾಗಿ ಉಳಿದು ಅವರು ಉತ್ತಮ ಸತ್ಪ್ರಜೆಗಳಾಗಿ ಮೂಡಿಬರಲು ಸಾಧ್ಯವಾಗುವುದು ಎಂದು ಉಜಿರೆ ಎಸ್ ಡಿ ಎಂ ವಸತಿ ಪ.ಪೂ.ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ|ಟಿ.ಕೃಷ್ಣಮೂರ್ತಿ ನುಡಿದರು. ಅವರು ಉಜಿರೆಯ ದೇಶಿಕೇಂದ್ರ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ,ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|ಮುರಳೀಧರ್, ಉಜಿರೆ ಎಸ್ ಡಿ ಎಂ ಕಾಲೇಜಿನ ಸಹಪ್ರಾಧ್ಯಾಪಕಿಯರಾದ ಡಾ|ವಂದನ ಜೈನ್ ಮತ್ತು ಅನುಷ ಬಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭಾಶಂಸನೆಗೈದರು.

ದೇಶಿಕೇಂದ್ರ ವಿದ್ಯಾಲಯದ ಅಧ್ಯಕ್ಷ ನವೀನಪ್ರಕಾಶ್ ಸ್ವಾಗತಿಸಿ,ಪ್ರಸ್ತಾವಿಸಿದರು. ಶಿಕ್ಷಕಿಯರಾದ ರಚನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರುತಿ ವಂದಿಸಿದರು. ವಿದ್ಯಾರ್ಥಿಗಳಿಂದ ಸುಭಾಷಿತಗಳು, ಸಂಸ್ಕೃತ ಶ್ಲೋಕಗಳು ,ದೇಶಭಕ್ತಿಗೀತೆ , ನೃತ್ಯ ಹಾಗು ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಿತು

LEAVE A REPLY

Please enter your comment!
Please enter your name here