ಉಜಿರೆ ನಿನ್ನಿಕಲ್ಲಿನಲ್ಲಿ ಇಂದಿರಮ್ಮ ಅವರಿಗೆ “ವಾತ್ಸಲ್ಯ” ಮನೆ ಹಸ್ತಾಂತರ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರು ಜ್ಞಾನವಿಕಾಸ ಯೋಜನೆಯನ್ವಯ ಮಹಿಳಾ ಸಬಲೀಕರಣದಿಂದ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಉದ್ದೇಶಹೊಂದಿ ಅವರಿಗೆ ಆರ್ಥಿಕ ಸೌಲಭ್ಯ,ಮಾಸಾಶನ,ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ನೆರವಾಗುತ್ತ ಬಂದಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಬಡವರಿಗೆ 850 ” ವಾ ತ್ಸಲ್ಯ ” ಮನೆಗಳನ್ನು ಹಸ್ತಾಂತರಿಸಿ ಅವರ ಬಾ ಳಿಗೆ ಬೆಳಕಾಗಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಈ ವರ್ಷ 6ನೇ ಮನೆಯನ್ನು ಉಜಿರೆ ಗ್ರಾಮದ ನಿನ್ನಿಕಲ್ಲಿನ ಇಂದಿರಮ್ಮ ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣಕಾಸು ವಿಭಾಗದ ಅಧಿಕಾರಿ ಶಾಂತಾರಾಮ ಪೈ ನುಡಿದರು.

ಅವರು ಮಾ 16 ರಂದು ಉಜಿರೆ ನಿನ್ನಿಕಲ್ಲಿನಲ್ಲಿ ಜ್ಞಾನವಿಕಾಸ ಯೋಜನೆಯನ್ವಯ ನಿರ್ಮಿಸಲಾದ ” ವಾತ್ಸಲ್ಯ ” ಮನೆಯನ್ನು ಇಂದಿರಮ್ಮ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ಮುಖ್ಯ ಅತಿಥಿ ಉಜಿರೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಉಷಾಕಿರಣ ಕಾರಂತ್ ಮಾತನಾಡಿ ಎಲೆಮರೆಯ ಕಾಯಂತೆ , ಯಾವುದೇ ಪ್ರಚಾರ ಬಯಸದೆ ಜನಸಾಮಾನ್ಯರಿಗೆ ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಹೇಮಾವತಿ ಹೆಗ್ಗಡೆಯವರ “ವಾತ್ಸಲ್ಯ” ಯೋಜನೆ ಬಡವರ ಪಾಲಿಗೆ ಆಶಾದೀಪವಾಗಿದೆ ಎಂದು ಶುಭ ಹಾರೈಸಿದರು.

ಉಜಿರೆಯ ಉದ್ಯಮಿ ಪ್ರಶಾಂತ್ ಜೈನ್ ಮಾತನಾಡಿ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಿಸ್ವಾರ್ಥ ಸೇವೆ,ಆ ರೋಗ್ಯ ಸೇವೆ, ಸುರಕ್ಷಾ ವಿಮೆ ಮೊದಲಾದ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಉದ್ಯಮಿ ಮಧುಸೂದನ ರಾವ್ ಶುಭಾಶಂಸನೆಗೈದರು. “ವಾತ್ಸಲ್ಯ” ಫಲಾನುಭವಿ ಇಂದಿ ರಮ್ಮ ಕೃತಜ್ಞತೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು,ಸೇವಾ ನಿರತರು ಭಾಗವಹಿಸಿದ್ದರು. ಯೋಜನಾಧಿಕಾರಿ ಯಶೋಧರ ನಿರೂಪಿಸಿದ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರಾ ವಂದಿಸಿದರು

LEAVE A REPLY

Please enter your comment!
Please enter your name here