






ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಉಜಿರೆ ಪರಿಸರದ ವಿವಿಧ ಭಾಗಗಳಿಂದ ನಿತ್ಯ ಹಸಿರು ಹೊರೆ ಕಾಣಿಕೆಯನ್ನು ಭಕ್ತರು ಭವ್ಯ ಮೆರವಣಿಗೆಯಲ್ಲಿ ತಂದು ” ಸಮೃದ್ಧಿ “ಉಗ್ರಾಣಕ್ಕೆ ಸಮರ್ಪಿಸಿದರು.



ಉಜಿರೆ ಲಲಿತನಗರ ನಿವಾಸಿಯಾಗಿ , ಹಿರಿಯ ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿಯವರು ತಾನು ಬರೆದ “ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಕ್ಷೇತ್ರ ಪರಿಚಯ ” ಕೃತಿಯ 5೦೦ ಪ್ರತಿಗಳನ್ನು ಶ್ರೀ ಕ್ಷೇತ್ರಕ್ಕೆ ಸೇವಾ ರೂಪದಲ್ಲಿ ಸಮರ್ಪಿಸಿದರು. ಕ್ಷೇತ್ರದ ವತಿಯಿಂದ ಅವರನ್ನು ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಮುರಳಿಕೃಷ್ಣ ಆಚಾರ್ ಮೊದಲಾದವರು ಗೌರವಿಸಿದರು









