ಅಕ್ರಮ ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ

0

ಧರ್ಮಸ್ಥಳ: ಅಕ್ರಮ ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕು, ಕೊಕ್ರಾಡಿ-ಎಳಂಬ ಸಾರ್ವಜನಿಕ ರಸ್ತೆ ಬದಿ ನಡೆದಿದೆ.

ವೇಣೂರು ಪೊಲೀಸ್ ಠಾಣಾ ಪೊಲೀಸ್‌ ಉಪ-ನಿರೀಕ್ಷಕರಾದ ಅಕ್ಷಯ ಡವಗಿ ರವರು, ಮಾ.3 ರಂದು ಮಧ್ಯಾಹ್ನ, ಸಿಬ್ಬಂದಿಗಳೊದಿಗೆ ರೌಂಡ್ಸ್ ಕರ್ತವ್ಯದಲ್ಲಿ, ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಸುಮಾರು 7-8 ಜನ ಗುಂಪು ಸೇರಿ ಅಕ್ರಮವಾಗಿ ಕೋಳಿ ಅಂಕ ಎಂಬ ಜುಗಾರಿ ಆಟ ಆಡುತ್ತಿರುವುದು ಕಂಡುಬಂದಿರುತ್ತದೆ.

ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದಾಗ ಆರೋಪಿತರು ಓಡಿ ಪರಾರಿಯಾಗಿದ್ದು, ಸ್ಥಳದಲ್ಲಿ ಕಟ್ಟಿ ಹಾಕಿದ್ದ ಮೂರು ಹುಂಜ ಕೋಳಿಗಳು ಮತ್ತು ಎರಡು ಸಾವಿರದ ನೂರು ರೂಪಾಯಿ ನಗದು ಹಣ ಬಿಟ್ಟುಹೋಗಿರುತ್ತಾರೆ. ಅವುಗಳನ್ನು ಸ್ವಾಧೀನಪಡಿಸಲಾಗಿದ್ದು, ಪರಾರಿಯಾದ ಆರೋಪಿತರ ಹೆಸರು ವಿಚಾರಿಸಿ ತಿಳಿಯಲಾಗಿನಗದು ಹಣ ಬಿಟ್ಟುಹೋಗಿರುತ್ತಾರೆ. ಅವುಗಳನ್ನು ಸ್ವಾದೀನ ಪಡಿಸಲಾಗಿದೆ

ಪ್ರಕಾಶ ಪೆರ್ಮುಡ, ಸಂಜೀವ ಕುತ್ತೂರು, ಸುರೇಶಕುತ್ತೂರು, ಸೇಸಪ್ಪ ಶೆಟ್ಟಿ ಸುಕ್ಕೇರಿ, ಜಯಚಂದ್ರ ರೈ ಕುತ್ತೂರು ಮತ್ತು ಇತರ ಮೂರು ಜನ ಎಂಬುದಾಗಿ ತಿಳಿದುಬಂದಿರುತ್ತದೆ. ಈ ಬಗ್ಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ಅ.ಕ್ರ 17/2026 ಕಲಂ : ಕಲಂ 87,93 KP Act, ಕಲಂ: 3,11 ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

LEAVE A REPLY

Please enter your comment!
Please enter your name here