







ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವು ಫೆ. 2 ರಂದು ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಶುಭಾರಂಭಗೊಂಡಿತು.
ಪ್ರಾರಂಭೋತ್ಸವದ ಕಾರ್ಯಕ್ರಮವಾಗಿ ಫೆ.2 ರಂದು ದಕ್ಷ ಮೆಲೊಡೀಸ್ ಉಜಿರೆ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸುನಿಲ್ ಉಜಿರೆ ನೇತೃತ್ವದಲ್ಲಿ ಹಿಮ್ಮೇಳದಲ್ಲಿ ಕೀ ಬೋರ್ಡ್ ನಲ್ಲಿ ಅಶ್ವಿತ, ತಬಲಾದಲ್ಲಿ ಶರತ್ ಪ್ರಭು, ರಿದಂ ಪ್ಯಾಡ್ ನಲ್ಲಿ ಸಚಿನ್ ಪುತ್ತೂರು ಸಹಕರಿಸಿದ್ದರು. ಗಾಯಕರಾಗಿ ಶಿವಶಂಕರ್ ಗೇರುಕಟ್ಟೆ, ಜಯಶ್ರೀ ಬೆಳ್ತಂಗಡಿ , ಪ್ರಣಮ್ಯ ಎಮ್ ಕೆ., ಇಂಚರ ಅರವಿಂದ ಕಾರಂತ್, ಪುಟಾಣಿ ತಮನ್ವಿ,ಅನ್ನಪೂರ್ಣ ಗೌಡ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.


“ಇಂಚಿತ್ತಿನ ಮಗನ್ ಪಡೆಯಲ್ ಪಾರ್ವತಿ “ತುಳು ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿ , ಜೈ ಜೈ ಹನುಮಾನ್ ಸಮೂಹ ಗಾಯನದೊಂದಿಗೆ ಕಾರ್ಯಕ್ರಮ ಸಮಾಪನಗೊಳಿಸಿದರು. ಭಕ್ತಿ,ಭಾವಗೀತೆಗಳ ಜತೆಗೆ ಪ್ರಣಮ್ಯ ಎಂ.ಕೆ ಮತ್ತು ಅನ್ನಪೂರ್ಣ ಗೌಡ ಭರತನಾಟ್ಯ ಪ್ರದರ್ಶನ ನೀಡಿ ಕಲಾಭಿಮಾನಿಗಳ ಮನತಣಿಸಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕಲಾವಿದರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.









