






ಬೆಳಾಲು :ನಿಂತಿಕಲ್ಲು ಅಂಗನವಾಡಿ ಗ್ರೂಪ್ ವತಿಯಿಂದ ಒಟ್ಟಾದ ಸುಮಾರು 60,000 ರೂಪಾಯಿ ಹಣವನ್ನು ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇರಮಾರು ಬೇಬಿ ಯವರ ಚಿಕಿತ್ಸೆಗಾಗಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.



ಈ ಸಂಧರ್ಭದಲ್ಲಿ ದಾನಿಗಳಾದ ಸಂಜೀವ ಗೌಡ ಕನಿಕ್ಕಿಲ, ಉಷಾದೇವಿ ಕಿನ್ಯಾಜೆ, ಅಂಗನವಾಡಿ ಕಾರ್ಯಕರ್ತೆ ಭಾರತಿ , ಬಾಲ ವಿಕಾಸ ಸಮಿತಿ ಸದಸ್ಯರು ಉಪಸ್ಥಿತರಿದ್ದರು.









