ಬೆಳಾಲು ಮಾಯ ಮಹಾದೇವ ದೇವಸ್ಥಾನದ ಜಾತ್ರೆ, ರಥೋತ್ಸವ

0

ಬೆಳಾಲು: ಮಾಯ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ. 26ರಿಂದ ಮಾ.4ರವರೆಗೆ ಆಲಂಬಾಡಿ ಪದ್ಮನಾಭತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಫೆ. 26ರಂದು ಬೆಳಿಗ್ಗೆ ಮಾಯ ಗುತ್ತಿನ ಮನೆಯಲ್ಲಿ ದೈವಗಳಿಗೆ ಕಲಶ ಪರ್ವ, ಫೆ. 27ರಂದು ಬೆಳಗ್ಗೆ ಗಣಹೋಮ, ಮಾಯ ಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿಯುವುದು, ಗ್ರಾಮಸ್ಥರಿಂದ, ಅನಂತೋಡಿ ಅನಂತಪದ್ಮನಾಭಾ ದೇವಸ್ಥಾನ, ಅರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೆರವಣಿಗೆ ಮೂಲಕ ಬಂದು ಹೊರೆಕಾಣಿಕೆ ಸಮರ್ಪಿಸಿದರು. ಬಳಿಕ ಬಾಲೆ ಮೊಟ್ಟಿಕಲ್ಲು ಪಾದಪೂಜೆ, ಸುರುಳಿ ಶ್ರೀ ಸುಬ್ರಹ್ಮಣ್ಯಶ್ವರ ಮಹಿಳಾ ಭಜನಾ ತಂಡ ಮತ್ತು ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಾಯಂಕಾಲ ತಂತ್ರಿವರ್ಯರಿಗೆ ಸ್ವಾಗತ, ಮಾಯಾ ಮತ್ತು ನಿಂತಿಕಲ್ಲು ಅಂಗನವಾಡಿ ಮತ್ತು ನಿಂತಿಕಲ್ಲು ಅಂಗನವಾಡಿ ಹಳೆ ವಿದ್ಯಾರ್ಥಿಗಳಿಂದ ನೃತ್ಯವೈವಿದ್ಯ, ದೇವಸ್ಥಾನದಲ್ಲಿ ತೋರಣ ಮುಹೂರ್ತ ರಾತ್ರಿ ಧ್ವಜಾರೋಹಣ, ಉಗ್ರಾಣ ಮುಹೂರ್ತ , ಮಹಾ ಪೂಜೆ, ಬಲಿ ಉತ್ಸವ ನಡೆಯಿತು. ಬಳಿಕ ಆರಿಕೋಡಿ ಮೆಲೋಡಿಸ್ ಇವರಿಂದ ಭಕ್ತಿ ರಸಮಂಜರಿ, ಮಾಯ ಶಿವಪ್ರಸಾದ್ ಮತ್ತು ಬಳಗದಿಂದ ಕಿರುನಾಟಕ “ಅಧ್ಯಕ್ಷೆರ್ ಬರೊಂದುಲ್ಲೆರ್” ಪ್ರದರ್ಶನಗೊಂಡಿತು.

ಫೆ. 28ರಂದು ಬೆಳಗ್ಗೆ ಗಣಹೋಮ, ಕಲಶ ಪೂಜೆ ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ. ಸಾಯಂಕಾಲ, ಮಾಯ ಭಜನಾ ಮಂಡಳಿ ಮಹಿಳಾ ತಂಡದಿಂದ ಮತ್ತು ಅನಂತೋಡಿ ಶ್ರೀ ಅನಂತೇಶ್ವರ ಮಕ್ಕಳ ಭಜನಾ ತಂಡದಿಂದ ಭಜನೆ, ಸಂಜೆ ದುರ್ಗಾ ಪೂಜೆ, ರಾತ್ರಿ ಮಹಾಪೂಜೆ, ಬಲಿ ಉತ್ಸವ, ಕೊಲ್ಪಾಡಿ ಮತ್ತು ಬೆಳಾಲು ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿಧ್ಯ, ಮಂಗಳೂರು ಸುಸ್ವರ ಮ್ಯೂಸಿಕ್ಸ್ ಆರ್ಕೆಸ್ಟ್ರಾ ಮತ್ತು ಇವೆಂಟ್ಸ್ ಇವರಿಂದ ಸಂಗೀತ ರಸಮಂಜರಿ, ರಾತ್ರಿ ಶ್ರೀ ಮಾಯ ಮಹಾದೇವ ಕಲಾ ತಂಡ ಮಾಯ ಇವರಿಂದ ನಾಟಕ “ಆರ್. ಬುಡಯೇರ್” ಪ್ರದರ್ಶನಗೊಂಡಿತು.

ಮಾ. 1ರಂದು ಬೆಳಗ್ಗೆ ಗಣಹೋಮ, ಸೂಡರ ಬಲಿ ಉತ್ಸವ, ಮಹಾ ಪೂಜೆ, ಅನ್ನಸಂತರ್ಪಣೆ, ಸಂಜೆ ಬೆಳಾಲು ಶ್ರೀ ಸರಸ್ವತಿ ಮಹಿಳಾ ಭಜನಾ ಮಂಡಳಿ ಮತ್ತು ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯಶ್ವರ ಭಜನಾ ಮಂಡಳಿಯಿಂದ ಭಜನೆ, ಬೆಳಾಲು ಅಂಗನವಾಡಿ ಶಿಕ್ಷಕರು ಮತ್ತು ಮಾಯ ಮಹಿಳಾ ತಂಡದಿಂದ ನೃತ್ಯ ವೈವಿಧ್ಯ, ರಾತ್ರಿ ಚಂದ್ರಮಂಡಲ ಉತ್ಸವ ಮತ್ತು ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ ಭಕ್ತಿ ಪ್ರಧಾನ ಹಾಸ್ಯ ತುಳು ನಾಟಕ ” ಕಾಶಿ ತೀರ್ಥ ” ಪ್ರದರ್ಶನಗೊಂಡಿತು.

ಮಾ.2ರಂದು ಬೆಳಗ್ಗೆ ಗಣಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಸಾಯಂಕಾಲ ಜನಾರ್ದನ ಪೆಲತ್ತಡಿ ಬಳಗದಿಂದ ಭಕ್ತಿಗಾನ ಸುಧೆ ನಡೆಯಿತು.ಮಾಯ ಗುತ್ತು ಮನೆಯಿಂದ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಭವ್ಯ ಮೆರವಣಿಗೆಯೊಂದಿಗೆ ಆಗಮನವಾಯಿತು.ರಾತ್ರಿ ಬಲಿ ಉತ್ಸವ,ರಥೋತ್ಸವ, ಭೂತಬಲಿ ಶಯನೋತ್ಸವ ನಡೆಯಿತು.ಮಾ.3ರಂದು ಬೆಳಗ್ಗೆ ಗಣಹೋಮ, ಕವಾಟೋದ್ಘಾಟನೆ, ಮಹಾಪೂಜೆ, ಅವಕೃತ, ಧ್ವಜಾವರೋಹಣ ನಡೆಯಿತು. .

LEAVE A REPLY

Please enter your comment!
Please enter your name here