ಬೆಳಾಲು ಪೆರಿಯಡ್ಕ ಶಾಲೆಗೆ ಮಂಗಳೂರು ಶಿಕ್ಷಾ ಸಾಥಿ ತಂಡದಿಂದ ಆರು ಫ್ಯಾನ್ ಗಳ ಕೊಡುಗೆ

0

ಬೆಳಾಲು : ಪೆರಿಯಡ್ಕ ಸ ಕಿ ಪ್ರಾ ಶಾಲೆಗೆ ಮಂಗಳೂರಿನ ಶಿಕ್ಷಾ ಸಾಥಿ ತಂಡದ ಸದಸ್ಯರು ಆಗಮಿಸಿ ಶಾಲಾ ಸಭಾಂಗಣಕ್ಕೆ ಅವಶ್ಯವಿರುವ ಆರು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು.

ತಂಡದ ಶಿಕ್ಷಕಿಯರರಾದ ಆಶಾಪ್ರಿಯಾ, ಸುಜಾತಾ, ಸೌಮ್ಯ ಆಗಮಿಸಿ ಕೊಡುಗೆಯನ್ನು ಹಸ್ತಾಂತರಿಸಿದರು. ಇವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಸಾದ್ ಗೌಡ, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಜಯಣ್ಣ ಗೌಡ ಮಿನಂದೇಲು, ಬೆಳಾಲು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಸತೀಶ್ ಗೌಡ ಎಳ್ಳುಗದ್ದೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here