ತಾಲೂಕಿನ ಹಲವೆಡೆ ಮಳೆ

0

ಬೆಳ್ತಂಗಡಿ: ತಾಲೂಕಿನ ವಿವಿದೆಡೆಗಳಲ್ಲಿ ಶನಿವಾರ ಅಪರಾಹ್ನ ವೇಳೆ ಗಾಳಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದೆ.ಕಕ್ಕಿಂಜೆ, ನೆರಿಯ ಚಾರ್ಮಾಡಿ, ಕಳೆಂಜ, ನಾರಾವಿ ಧರ್ಮಸ್ಥಳ, ಬದ್ಯಾರು, ನಡ ಪರಿಸರದಲ್ಲಿ ಮಳೆ ಸುರಿದಿದ್ದು, ಕೆಲವೆಡೆ ದೊಡ್ಡ ಮಳೆ ಸುರಿದರೆ ಮತ್ತೆ ಕೆಲವೆಡೆ ಸಾಧಾರಣ ಮಳೆ ಸುರಿದಿದೆ.

ಕಕ್ಕಿಂಜೆ ಬಸ್ತಿ ಸಮೀಪ ಗಾಳಿ ಮಳೆಗೆ ಭಾರೀಗಾತ್ರದ ಮರವೊಂದು ವಿದ್ಯುತ್ ಲೈನ್ ನ ಮೇಲೆ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here