ನೆಲ್ಯಾಡಿಯ ಕೆ.ಸಿ.ವರ್ಗೀಸ್ ಕೊಲೆ ಪ್ರಕರಣ: ಅರಸಿನಮಕ್ಕಿಯ ಸಿ.ಟಿ.ರಾಜು ಯಾನೆ ವರ್ಗೀಸ್ ಸಹಿತ ಮೂವರ ಬಂಧನ

0

ಬೆಳ್ತಂಗಡಿ: ಕೆಲವು ದಿನಗಳ ಹಿಂದೆ ನಡೆದ ನೆಲ್ಯಾಡಿ ಗ್ರಾಮದ ಕೊಪ್ಪಮಾದೇರಿ ನಿವಾಸಿ ಕೆ.ಸಿ. ವರ್ಗೀಸ್ (೭೩) ಅವರ ಕೊಲೆಗೆ ಸಂಬಂಧಿಸಿ ಉಪ್ಪಿನಂಗಡಿ ಠಾಣಾ ಪೊಲೀಸರು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಸಿ.ಟಿ. ರಾಜು ಯಾನೆ ವರ್ಗೀಸ್ ಸಹಿತ ಮೂವರನ್ನು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಅಟೋ ರಿಕ್ಷಾ ಚಾಲಕ ಕೆ.ವಿ.ತೋಮಸ್ ಎಂಬವರು ಪ್ರಾರಂಭದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರಿಗೆ ದೂರು ನೀಡಿ ತನ್ನ ತಂದೆ ಕೆ.ಸಿ.ವರ್ಗೀಸ್ ಮತ್ತು ತಾಯಿ ಎಸ್ತೆರಾ ವರ್ಗೀಸ್ ಅವರು ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ಎಂಬಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಫೆ.೮ರಂದು ತಾಯಿಯನ್ನು ಚಿಕಿತ್ಸೆಗೆ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ರಾತ್ರಿ ೮ ಗಂಟೆಗೆ ಮಾವನ ಮನೆಯಲ್ಲಿ ಬಿಟ್ಟಿzನೆ. ಆ ಸಮಯ ಕೊಪ್ಪಮಾದೇರಿಯ ಮನೆಯಲ್ಲಿ ತಂದೆ ಕೆ.ಸಿ.ವರ್ಗೀಸ್ ಮಾತ್ರ ಇದರು. ಬಳಿಕ ನೆಲ್ಯಾಡಿ ಪೇಟೆಯಲ್ಲಿ ಆಟೋ ಬಾಡಿಗೆ ಮಾಡಿ ರಾತ್ರಿ ೧೧ ಗಂಟೆಗೆ ನನ್ನ ಮನೆಗೆ ಹೋಗುವಾಗ ತಂದೆ-ತಾಯಿ ವಾಸ ಮಾಡಿಕೊಂಡಿದ್ದ ಮನೆಯ ಬಾಗಿಲು ತೆರೆದುಕೊಂಡಿರುವುದನ್ನು ನೋಡಿ ಮನೆಯೊಳಗಡೆ ಹೋದಾಗ ತಂದೆ ಕೆ.ಸಿ.ವರ್ಗೀಸ್‌ರವರು ಮಂಚದ ಕೆಳಗೆ ಬಿದ್ದುಕೊಂಡು ತಲೆಗೆ ರಕ್ತ ಗಾಯವಾಗಿರುವುದನ್ನು ಕಂಡು ೧೦೮ ಆಂಬುಲೆನ್ಸ್ ಬರಹೇಳಿ ಅದರಲ್ಲಿ ಮಾವನೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಕೆ.ಸಿ.ವರ್ಗಿಸ್ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ.

ತಂದೆ ಒಬ್ಬರೇ ಮನೆಯಲ್ಲಿದ್ದ ಸಮಯ ಅವರ ಮರಣ ಸಂಭವಿಸಿದ್ದು ಇದರಲ್ಲಿ ಸಂಶಯವಿದೆ. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದರು. ದೂರು ಸ್ವೀಕರಿಸಿದ್ದ ಉಪ್ಪಿನಂಗಡಿ ಠಾಣಾ ಪೊಲೀಸರು ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡಿದ್ದರು.

ಕೊಲೆ ಕೇಸು ದಾಖಲು; ಕೆ.ಸಿ.ವರ್ಗೀಸ್ ಅವರ ಸಾವಿಗೆ ಸಂಬಂಧಿಸಿ ಪೊಲೀಸರು ಸ್ಥಳದ ಮಹಜರು ನಡೆಸಿದ್ದರು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಶವ ಪರೀಕ್ಷೆ ನಡೆಸಿದ ವೈದ್ಯರು ವರದಿ ನೀಡಿದ್ದರು. ತನಿಖೆ ಸಂದರ್ಭದಲ್ಲಿ ಇದೊಂದು ಕೊಲೆ ಪ್ರಕರಣವೆಂದು ಕಂಡು ಬಂದಿರುವುದರಿಂದ ಕೆ.ಸಿ.ವರ್ಗೀಸ್ ಅವರನ್ನು ಯಾವುದೋ ವಿಚಾರಕ್ಕೆ ಯಾರೋ ವ್ಯಕ್ತಿಗಳು ಫೆ. ೮ರಂದು ರಾತ್ರಿ ೭ರಿಂದ ೧೧ ಗಂಟೆಯ ಅವಧಿಯಲ್ಲಿ ಯಾವುದೋ ಸಾಧನದಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಕೇಸು ದಾಖಲಿಸಿಕೊಂಡಿದ್ದರು.

ಮೃತರ ಪುತ್ರ ಮತ್ತು ಬಾವಂದಿರಿಬ್ಬರ ಸೆರೆ: ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಕೆ.ಸಿ.ವರ್ಗೀಸ್ ಅವರ ಪುತ್ರ ಹಾಗೂ ಭಾವಂದಿರಿಬ್ಬರನ್ನು ಬಂಧಿಸಿದ್ದಾರೆ. ಮೃತರ ಪುತ್ರ ಕೆ.ವಿ.ತೋಮಸ್ ಯಾನೆ ವಿಲ್ಸನ್ ನೆಲ್ಯಾಡಿ(೩೯), ಸಿ.ಟಿ.ರಾಜು ಯಾನೆ ವರ್ಗೀಸ್ ಅರಸಿನಮಕ್ಕಿ (೫೯) ಮತ್ತು ಚಾಕೊಚ್ಚಿ ನೆಲ್ಯಾಡಿ (೫೧) ಬಂಧಿತರು. ಮೃತ ಕೆ.ಸಿ.ವರ್ಗಿಸ್ ತನ್ನ ಹೆಂಡತಿ ಎಸ್ತೆರಾ ವರ್ಗೀಸ್ ಅವರಿಗೆ ಹೊಡೆದಿದ್ದು ಅಕೆ ಮನೆಯಿಂದ ಹೊರೆಗೆ ಸ್ವಲ್ಪ ದೂರ ಹೋಗಿ ಕುಳಿತಿದ್ದರು. ಇದನ್ನು ನೋಡಿದ ಒಬ್ಬ ವ್ಯಕ್ತಿ ಈ ಬಗ್ಗೆ ಆಕೆಯ ಮಗ ಕೆ.ವಿ.ತೋಮಸ್‌ಗೆ ತಿಳಿಸಿದ್ದರು.ಬಳಿಕ ಮಗ ತೋಮಸ್ ತನಗೆ ಪರಿಚಯದ ಆಟೋ ರಿಕ್ಷಾದವರನ್ನು ಬರಮಾಡಿ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿದ್ದ.

ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ನೋಡಿ ತನ್ನ ತಮ್ಮ ಚಾಕೋಚ್ಚನಿಗೆ ಕಾಲ್ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿರುವುದಾಗಿ ತಿಳಿಸಿ ಬೇಗ ಬಾ ಎಂದು ಕರೆದಿದ್ದ. ಹಾಗೆ ಬಂದು ತೋಮಸ್‌ಗೆ ಕರೆ ಮಾಡಿ ವರ್ಗೀಸ್ ಅವರನ್ನು ಹೆದರಿಸಬೇಕೆಂದು ಚರ್ಚೆ ಮಾಡಿ ಥಾಮಸ್‌ನನ್ನು ಸ್ವಲ್ಪ ದೂರ ಹೊರಗೆ ಬಿಟ್ಟು ಚಾಕೋಚ್ಚ ಮತ್ತು ರಾಜುರವರು ಒಳಗೆ ಹೋಗಿ ಕೆ.ಸಿ.ವರ್ಗಿಸ್‌ರವರಿಗೆ ಕಟ್ಟಿಗೆಯಿಂದ ಹೊಡೆದು ಹೊರಗೆ ಬಂದು ಥಾಮಸ್ ಅವರಲ್ಲಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ ಅವರನ್ನು ಆಂಬುಲೆನ್ಸ್‌ನಲ್ಲಿ ಆಸತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿ ಹೋಗಿದ್ದಾರೆ.

ನಂತರ ಥಾಮಸ್ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದು ತನ್ನ ತಂದೆ ಮಂಚದಿಂದ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಪೆಟ್ಟಾಗಿ ಮೃತಪಟ್ಟಿರಬಹುದಾಗಿ ತಿಳಿಸಿ ಇದೊಂದು ಅಸ್ವಾಭಾವಿಕ ಪ್ರಕರಣವೆಂದು ತಿಳಿಸಿದ್ದ. ಕೂಲಂಕುಶವಾಗಿ ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪದಡಿ ಬಂಧಿತರಾಗಿರುವ ಕೆ.ವಿ.ತೋಮಸ್ ಯಾನೆ ವಿಲ್ಸನ್ ನೆಲ್ಯಾಡಿ, ಸಿ.ಟಿ. ರಾಜು ಯಾನೆ ವರ್ಗೀಸ್ ಅರಸಿನಮಕ್ಕೆ ಮತ್ತು ಚಾಕೊಚ್ಚಿ ನೆಲ್ಯಾಡಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here