







ಉಜಿರೆ : ಬೆಂಗಳೂರಿನ ನಿವೃತ್ತ ಬ್ರಿಗೇಡಿಯರ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಫೆ. 19ರಂದು ಉಜಿರೆ ಬೆನಕ ಹೆಲ್ತ್ ಸೆಂಟರಿಗೆ ಸೌಹಾರ್ದ ಭೇಟಿ ನೀಡಿದರು.



ನಿವೃತ್ತ ಸೇನಾನಿ, ಪುತ್ತೂರಿನ ಕ್ಯಾಂಪ್ಕೋ ಹಿರಿಯ ವ್ಯವಸ್ಥಾಪಕ ರಂಗನಾಥ್ ಅವರು ಜೊತೆಯಲ್ಲಿದ್ದರು.ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಅವರು ಇಬ್ಬರಿಗೂ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಅವರು ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸೇವೆಗಳ ಕುರಿತು ಮಾಹಿತಿ ಪಡೆದುಕೊಂಡರು. ಉಜಿರೆಯಂತಹ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡು ಈ ಪ್ರದೇಶದ ಜನರಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಬೆನಕ ಹೆಲ್ತ್ ಸೆಂಟರ್ ಇನ್ನಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳ್ಳಲಿ ಎಂದು ಶುಭಹಾರೈಸಿದರು.ಇದೇ ವೇಳೆ ದ.ಕ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು, ಬೆಳ್ತಂಗಡಿ ತಾಲೂಕು ಅಧ್ಯಕ್ಷ ತಂಗಚ್ಚನ್, ತಾಲೂಕು ಉಪಾಧ್ಯಕ್ಷ ರವಿ ಪ್ರಸಾದ್, ನಿರ್ದೇಶಕ ಹರೀಶ್ ರೈ, ಸೀತಾರಾಮ್ ಉಪಸ್ಥಿತರಿದ್ದರು









