







ಉಜಿರೆ: ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಕುಮಾರ ಸ್ವಾಮಿ ಅವರು ಸಕುಟುಂಬಿಕರಾಗಿ ಮತ್ತು ಪುತ್ತೂರು ಕ್ಯಾಂಪ್ಕೊ ಕಂಪೆನಿಯ ಹಿರಿಯ ಮ್ಯಾನೇಜರ್ ನಿವೃತ್ತ ಸುಭೇದಾರ್ ರಂಗನಾಥ್ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ, ಸುರ್ಯ ಶ್ರೀ ಸದಾಶಿವರುದ್ರ ದೇವಾಲಯ ಹಾಗೂ ಬ್ರಹ್ಮಕಲಶಕ್ಕೆ ತಯಾರಾಗುತ್ತಿರುವ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು.





ನಂತರ ಗ್ರಾಮಾಂತರ ಪ್ರದೇಶದಲ್ಲಿ ನಿವೃತ್ತ ಸೈನಿಕರು ಮತ್ತು ಅವಲಂಬಿತರಿಗೆ ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಸುಸಜ್ಜಿತ ನುರಿತ ತಜ್ಞ ವೈದ್ಯಕೀಯ ಸೇವೆ ನೀಡುತ್ತಿರುವ ಬೆನಕ ಹೆಲ್ತ್ ಸೆಂಟರ್ ಉಜಿರಿಗೆ ಹಾಗೂ ಉಜಿರೆಯ ಅಜಿತ್ ನಗರದಲ್ಲಿರುವ ಎಕೆಎಮ್ಎಸ್ಎಸ್ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಕಾಂಚೋಡ್ ಅವರ ಡ್ರ್ಯಾಗನ್ ಹಣ್ಣಿನ ತೋಟಕ್ಕೆ ಭೇಟಿ ನೀಡಿದರು.


ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲೆಯ ಗೌರವಾಧ್ಯಕ್ಷರು ಲಯನ್ ಡಾ.ಗೋಪಾಲಕೃಷ್ಣ ಕಾಂಚೋಡು ಎಕೆಎಮ್ಎಸ್ಎಸ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಎನ್. ಪಿ. ತಂಗಚ್ಚನ್, ಉಪಾಧ್ಯಕ್ಷ ರವಿಪ್ರಸಾದ್, ನಿರ್ದೇಶಕ ಹರೀಶ್ ರೈ, ಮೋಹನ್ ಶೆಟ್ಟಿ ಮುದ್ದಿಗೆ, ಸದಸ್ಯ ಅರುಣ ಶೆಟ್ಟಿ, ನಿವೃತ್ತ ಯೋಧ ಸೀತಾರಾಮ ಶೆಟ್ಟಿ ಜಲನೇನಾ, ನಿವೃತ್ತ ಯೋಧ ಶ್ರೀ ಕೃಷ್ಣ ಭಟ್ ಮುಂತಾದವರು ಜೊತೆಗಿದ್ದರು.









