ಉಜಿರೆ ಪೆರ್ಲ ತಂಗಾಯಿ ಶ್ರೀ ವನದುರ್ಗಾ ಮಹೋತ್ಸವ

0

ಉಜಿರೆ: ಉಜಿರೆಯ ಪೆರ್ಲ ತಂಗಾಯಿ ಶ್ರೀ ವನದುರ್ಗಾ ವಾರ್ಷಿಕ ಮಹೋತ್ಸವವು ಫೆ.11 ರಂದು ಅನುವಂಶಿಕ ಆಡಳಿತ ಮೊಕ್ತೇಸರ ಪೆರ್ಲ ಲಕ್ಷ್ಮೀನಾರಾಯಣ ಪ್ರಸಾದ್ ಒಪ್ಪಂತಾಯರ ನೇತೃತ್ವದಲ್ಲಿ ಬಳ್ಳಕುರಾಯರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಪುಣ್ಯಾಹ, ಪ್ರಾರ್ಥನೆ, ಗಣಹೋಮ,ಚಂಡಿಕಾ ಹೋಮ, ಕೊಪ್ಪರಿಗೆ ಏರುವುದರೊಂದಿಗೆ ಆರಂಭಗೊಂಡಿತು.

ವೈದಿಕರಿಂದ ಸ್ತೋತ್ರ ಪಾರಾಯಣ, ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯವರಿಂದ ಭಜನೆ, ಮದ್ಯಾಹ್ನ ಶ್ರೀ ದೇವಿಯ ಮಹಾಪೂಜೆ, ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ,ರಾತ್ರಿ ದೀಪಾರಾಧನೆ, ರಂಗಪೂಜೆ, ಬಟ್ಟಲು ಕಾಣಿಕೆ ಹಾಗು ಪ್ರಸಾದ ವಿತರಣೆಯೊಂದಿಗೆ ವಿದ್ಯುಕ್ತವಾಗಿ ನಡೆಯಿತು. ಊರಿನ ಭಕ್ತಾದಿಗಳು ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು. ಅರ್ಚಕ ಕೃಷ್ಣಮೂರ್ತಿ ಒಪ್ಪಂತಾಯರು ಧಾರ್ಮಿಕ ಪೂಜಾ ಕಾರ್ಯದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here