ಉಜಿರೆ: ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ವೈದಿಕ ಅನುಷ್ಠಾನ ಸಮಿತಿ ಸಭೆ

0

ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ವೈದಿಕ ಅನುಷ್ಠಾನ ಸಮಿತಿಯ ಸಭೆಯು ಫೆ 13 ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ “ಉಜಿರೆ ಬ್ರಹ್ಮಕಲಶೋತ್ಸವ” ಕ್ಕೆ ಸಂಬಂಧಿಸಿದ ” ವೈದಿಕ ಅನುಷ್ಠಾನ ಸಮಿತಿ” ಯ ಸಭೆಯು ತಾಲೂಕಿನ ಆರು ಬ್ರಾಹ್ಮಣ ಪಂಗಡಗಳ ಒಗ್ಗೂಡುವಿಕೆಯಿಂದ ಅರ್ಥಪೂರ್ಣವಾಗಿ ನಡೆಯಿತು.

ತಾಲೂಕಿನ ಬ್ರಾಹ್ಮಣ ಪಂಗಡಗಳಾದ ಕೂಟ ಮಹಾ ಜಗತ್ತು, ಸ್ಥಾನಿಕ ಬ್ರಾಹ್ಮಣ ಸಭಾ,ಕರಾಡ ಬ್ರಾಹ್ಮಣ,ಹವ್ಯಕ,ಚಿತ್ಪಾವನ ಹಾಗು ತುಳು ಶಿವಳ್ಳಿ ಬ್ರಾಹ್ಮಣ ಸಂಘಟನೆಯ ಪ್ರಮುಖರಾದ ತಿವಿಕ್ರಮ ಹೆಬ್ಬಾರ್, ವಿಷ್ಣು ಭಟ್, ಪಾಂಡುರಂಗ ಮರಾಠೆ , ವಿದ್ಯಾಕುಮಾರ್ ಕಾಂಚೋಡು, ರಾಜಪ್ರಸಾದ್ ಪೊಲ್ನಾಯ , ಮಹಿಳಾ ಘಟಕದ ಕಾರ್ಯದರ್ಶಿ ಅಕ್ಷತಾ ಹೆಬ್ಬಾರ್ ಉಪಸ್ಥಿತರಿದ್ದರು.ವೈದಿಕ ಅನುಷ್ಠಾನ ಸಮಿತಿಯ ವಿವಿಧ ವಿಭಾಗಗಳ ಮೂಲಕ ತಾಲೂಕಿನ ಸಮಸ್ತ ಬ್ರಾಹ್ಮಣ ಬಂಧುಗಳು ಪರಸ್ಪರ ಸಹಕರಿಸುತ್ತಾ 10 ದಿವಸಗಳ ಕಾರ್ಯಕ್ರಮಗಳಲ್ಲಿ ಪ್ರಸಾದ ತಯಾರಿ, ಪ್ಯಾಕಿಂಗ್, ತೀರ್ಥ ಪ್ರಸಾದ, ಪ್ರಾರ್ಥನೆ – ಗೌರವಾರ್ಪಣೆ – ಪ್ರಸಾದ ವಿತರಣೆ, ಕೌಂಟರಿನ ಕೆಲಸಗಳು, ಸ್ವಚ್ಛತೆ, ಬ್ರಾಹ್ಮಣಾರಾಧನೆಗೆ ತರಕಾರಿ ಹೆಚ್ಚುವಿಕೆ, ಬಡಿಸುವಿಕೆ, ಯಾಗಗಳ ವ್ಯವಸ್ಥೆಗಳು, ಪೂಜೆಗಳು ಇತ್ಯಾದಿಗಳನ್ನು ಸ್ವಯಂಸೇವಕರಾಗಿ ದೇವರ ಸೇವೆಯ ಮನೋಭಾವದಿಂದ ನಿರ್ವಹಿಸಿ ಬ್ರಹ್ಮಕಲಶೋತ್ಸವದ ಸರ್ವ ಯಶಸ್ಸಿಗೆ ಕಾರಣರಾಗಬೇಕು ಎಂದು ಸಂಚಾಲಕ ಬಿ.ಕೆ.ಧನಂಜಯ ರಾವ್ ಹೇಳಿ ಜವಾಬ್ದಾರಿ ಹಂಚಿಕೆ ಕಾರ್ಯ ನಡೆಸಿದರು.

ಶರತ್ ಕೃಷ್ಣ ಪಡುವೆಟ್ನಾಯರು ಮಾತನಾಡಿ ನಮಗೆ ದೊರೆತ ಅಪೂರ್ವ ಸುಯೋಗವನ್ನು ನಾವು ಬಳಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಬಯಸುತ್ತೇನೆ ಎಂದರು. ತಾಲೂಕು ತುಳು ಶಿವಳ್ಳಿ ಸಭಾ ಗೌರವಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ, ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ,ಬಿ.ಕೆ.ಧನಂಜಯ ರಾವ್ ವಂದಿಸಿದರು. ತಾಲೂಕಿನ  ಆರು   ಬ್ರಾಹ್ಮಣ ಪಂಗಡಗಳ  ಪ್ರಮುಖರು,ಮಹಿಳಾ ಘಟಕಗಳ  ಪ್ರಮುಖರು ಭಾಗವಹಿಸಿ,ಅಭಿಪ್ರಾಯ ವಿನಿಮಯ ನಡೆಸಿದರು.

LEAVE A REPLY

Please enter your comment!
Please enter your name here