







ಉಜಿರೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಗುರಿಪಳ್ಳ ಇಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷಕಿ ಅವರು ಶಾಲಾ ಅಕ್ಷರ ದಾಸೋಹ ಖಾತೆ ಮತ್ತು ಎಸ್.ಎಸ್.ಎ ಖಾತೆಯಲ್ಲಿ ನಕಲಿ ಸಹಿ ಮಾಡಿ ಹಣವನ್ನು ಡ್ರಾ ಮಾಡಿರುವ ಬಗ್ಗೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಉಜಿರೆ ಗ್ರಾಮ ಪಂಚಾಯತ್ ಗೆ ದೂರು ನೀಡಿರುವುದು ವರದಿಯಾಗಿದೆ.ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಾಂಭ ಅವರ ಅವಧಿಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯ ಶಿಕ್ಷಕಿ ಅವರು ಶಾಂಭ ಅವರ ನಕಲು ಸಹಿ ಮಾಡಿ ಅಕ್ಷರ ದಾಸೋಹ ಖಾತೆಯಿಂದ ರೂ.27630ವನ್ನು ಡ್ರಾ ಮಾಡಿರುತ್ತಾರೆ.



ಜೊತೆಗೆ ಎಸ್.ಎಸ್.ಎ ಖಾತೆಯಿಂದ ಮೂರು ಚೆಕ್ ಗಳು ಆದ ಚೆಕ್ ನಂಬ್ರ 670712 ರಿಂದ ರೂ.6723, 670713 80 5.10,000, 67071180 5.7742 ಹಣವನ್ನು ನಕಲಿ ಸಹಿ ಮೂಲಕ ಡ್ರಾ ಮಾಡಿರುತ್ತಾರೆ. ಈಬಗ್ಗೆ ಮುಖ್ಯ ಶಿಕ್ಷಕಿ ಮೇಲೆ ಸೂಕ್ತ ಕ್ರಮ ಕೈಗೊಂಡು, ಡ್ರಾ ಮಾಡಿರುವ ಎಲ್ಲಾ ಮೊತ್ತವನ್ನು ಆಯಾ ಖಾತೆಗೆ ಜಮೆ ಮಾಡುವಂತೆ ಉಜಿರೆ ಗ್ರಾಮ ಪಂಚಾಯತ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿದ್ದು, ದಕ್ಷಿಣ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರ ರವರ ಗಮನಕ್ಕೂ ತರಲಾಗಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ತಿಳಿಸಿರುತ್ತಾರೆ.









