







ಬೆಳ್ತಂಗಡಿ: ಬಂಟರ ಸಂಘದ ಗೌರವ ಮಾರ್ಗದರ್ಶಕರಾದ ಶಶಿಧರ ಶೆಟ್ಟಿ ನವಶಕ್ತಿ, ಉದ್ಯಮಿಗಳು ಬರೋಡ ಅವರ ಮಾತೃಶ್ರೀಯವರಾದ ಕಾಶಿ ಶೆಟ್ಟಿಯವರ ಸ್ಮರಣಾರ್ಥ “ಕಾಶಿ ಸದನ ” ವಸತಿ ಯೋಜನೆಯ ಸಹಾಯ ಹಸ್ತವನ್ನು ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ತಾಲೂಕಿನ 9 ಬಂಟರ ವಲಯಗಳ ತಲಾ ಒಂದೊಂದು ಅಶಕ್ತ ಕುಟುಂಬಗಳಿಗೆ ನೀಡುವುದೆಂದು ನಿರ್ಣಯಿಸಲಾಗಿತ್ತು. ಜ.31 ಶನಿವಾರದಂದು ಪೂರ್ವಾಹ್ನ 10.30 ಕ್ಕೆ ಅಳದಂಗಡಿ ವಲಯ ತೆಂಕಕಾರಂದೂರು ಗ್ರಾಮದ ವಿಜಯ ಶೆಟ್ಟಿ ಇವರ ನಿವೇಶನದ ಭೂಮಿ ಪೂಜೆ ನಡೆಯಿತು.



ಇದರ ಶಿಲಾನ್ಯಾಸವನ್ನು ಸಂಘದ ಗೌರವ ಮಾರ್ಗದರ್ಶಕ ಶಶಿಧರ ಶೆಟ್ಟಿ ನವಶಕ್ತಿ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಉಪಾಧ್ಯಕ್ಷ ನವೀನ್ ಸಾಮಾನಿ ಕರಂಬಾ ರುಬೀಡು, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ, ಎಂ. ಜಯರಾಮ ಭಂಡಾರಿ ಧರ್ಮಸ್ಥಳ ಸಂಚಾಲಕರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ತಾಲೂಕು ಬಂಟರ ಸಂಘದ ಸಂಘಟನಾ ಸಂಚಾಲಕರಾದ ರಘುರಾಮ ಶೆಟ್ಟಿ ಸಾಧನ ಉಜಿರೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ದಾ, ಪದ್ಮನಾಭ. ಟಿ. ಮಾಲಕರು ಮಯೂರ ಟ್ಯಾಕ್ಸ್ ಟೈಲ್ ಬೆಳ್ತಂಗಡಿ. ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಎನ್. ಸಾಮಾನಿ, ವಲಯದ ಅಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ, ಸಚಿನ್ ಶೆಟ್ಟಿ ಕುರೆಲ್ಯ, ಸದಾಶಿವ ಶೆಟ್ಟಿ ಬಳಂಜ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಪ್ರಕಾಶ್ ಶೆಟ್ಟಿ ನೊಚ್ಚ ಧನ್ಯವಾದವಿತ್ತರು.










