






ಬೆಳ್ತಂಗಡಿ: ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳು ಉಜಿರೆ, ವಕೀಲರ ಸಂಘ ಬೆಳ್ತಂಗಡಿ, ರಾವ್ಸ್ ಚೆಸ್ ಕಾರ್ನರ್ ಮಂಗಳೂರು ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಜ.31ರಂದು ಎಸ್.ಡಿ.ಎಂ ಕಲಾಭವನದಲ್ಲಿ ನಡೆದ ಎಸ್. ಡಿ. ಎಂ, ಆರ್‌ಸಿಸಿ, ರೋಟೋ, ಲಾಯರ್ಸ್ ಇಂಟರ್ನ್ಯಾಷನಲ್ ಚೆಸ್ ಫೆಡರೇಷನ್ ನ ಚೆಸ್ ಕಪ್ 2026 ಕಾರ್ಯಕ್ರಮವನ್ನು ಬೆಳ್ತಂಗಡಿ ಹಿರಿಯ ನ್ಯಾಯಾಧೀಶ ಮನು ಬಿ.ಕೆ. ಉದ್ಘಾಟಿಸಿ ಚಾಲನೆ ನೀಡಿದರು.
ಎಸ್. ಡಿ. ಎಂ ಶಿಕ್ಷಣ ಸಂಸ್ಥೆಗಳ ಡಾಕ್ಟರ್ ಸತೀಶ್ಚಂದ್ರ ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.



ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ ದೊರೆತಿದ್ದು ಈಗಾಗಲೇ 147ಕ್ಕೂ ಅಧಿಕ ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ನಾಳೆ ಸಂಜೆಯ ವರೆಗೆ ಪಂದ್ಯಾಟ ಮುಂದುವರಿಯಲಿದ್ದು ಸಂಜೆ 5 ಗಂಟೆಗೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ವಕೀಲ ರಕ್ಷಿತ್ ಶಿವರಾಂ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಭಾರತೀಯ ಸೇನೆಯ ರಿಟೈರ್ಡ್ ಮೇಜರ್ ಜನರಲ್ ಎಂ.ವಿ. ಭಟ್, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ, ಹಿರಿಯ ವಕೀಲ ರತ್ನವರ್ಮ ಬುಣ್ಣು, ರಾವ್ಸ್ ಚೆಸ್ ಕಾರ್ನರ್ ನ ಸಹ ಸಂಸ್ಥಾಪಕಿ ಮಹಿಳಾ ಗ್ರಾಂಡ್ ಮಾಸ್ಟರ್ ಇಶಾ ಶರ್ಮಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ, ರೋಟರಿ ಕ್ಲಬ್ ನ ಸದಸ್ಯರು, ವಕೀಲರು, ಚೆಸ್ ಆಟಗಾರರು ಉಪಸ್ಥಿತರಿದ್ದರು.

ರೊಟೇರಿಯನ್ ರೊನಾಲ್ಡ್ ಲೋಬೊ ಪ್ರಾರ್ಥಿಸಿದರು. ಹಿರಿಯ ನ್ಯಾಯವಾದಿ ಬಿ.ಕೆ. ಧನಂಜಯ್ ರಾವ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಗೌಡ ವಂದಿಸಿದರು.









