






ಅರಸಿನಮಕ್ಕಿ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಜ. 31ರಿಂದ ಫೆ -1ರಂದು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಇಂದು ಬೆಳಗ್ಗೆ 8 ಗಂಟೆಗೆ ಪ್ರಾರ್ಥನೆ, ಪುಣ್ಯಾಹ 10:30ಕ್ಕೆ ಗ್ರಾಮಸ್ಥರಿಂದ ಹೊರ ಕಾಣಿಕೆ ಸಮರ್ಪಣೆಯಾಗಿದ್ದು 12:00ಗೆ ಚಂಡಿಕಾ ಹೋಮದ ಪೂರ್ಣಹುತಿ ಬಳಿಕ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6:00 ರಿಂದ ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ ಬಳಿಕ ರಂಗ ಪೂಜೆ ನೆರವೇರಲಿದೆ. ಫೆಬ್ರವರಿ 1ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ ಪಂಚವಿಂಶತಿ ಕಲಶ ಪೂಜೆ ಪ್ರಧಾನ ಹೋಮ ಕಲಶಾಭಿಷೇಕ 10 ಗಂಟೆಗೆ ಮಹಾಪೂಜೆ ಅಂತರ ದರ್ಶನ ಬಳಿ ಕಟ್ಟಲು ಕಾಣಿಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ಆರರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಏಳರಿಂದ ಉತ್ಸವ ಬಳಿಕಟ್ಟೆ ಪೂಜೆ ಪ್ರಸಾದ ವಿತರಣೆ ಮಂತ್ರಾಕ್ಷತೆ ನೆರವೇರಲಿದೆ.



ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಳಕ್ಕೆ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.









