






ಉಜಿರೆ: ಉಜಿರೆಯಲ್ಲಿ ಅತೀ ವೇಗದಿಂದ ಅಜಾಗರೂಕತೆ ಹಾಗೂ ಮಿತಿಮೀರಿದ ವೇಗದಿಂದ ಕಾರೊಂದನ್ನು ಧರ್ಮಸ್ಥಳ ಕಡೆಯಿಂದ ಕಾಲೇಜು ರಸ್ತೆಯಲ್ಲಿ ಬರುತ್ತಿರುವ ಸಂಧರ್ಮದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ಜ.28ರಂದು ರಾತ್ರಿ ನಡೆದಿದೆ.


ಉಜಿರೆ ಬೆಳಾಲು ಕ್ರಾಸ್ ಬಳಿ ಪೇಟೆಯಲ್ಲಿ ಸ್ಕೂಟರ್ ತಾಗಿ, ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಹೊಂಡಕ್ಕೆ ಬಿದ್ದಿದೆ. ಸ್ಕೂಟರ್ ನಲ್ಲಿದ್ದ ಯುವತಿಗೆ ಗಾಯವಾಗಿದ್ದು ಉಜಿರೆ ಖಾಸಗಿ ಆಸ್ಪತ್ರೆಗೆ ಸ್ಥಳೀಯರ ಸಾಕಾರದಿಂದ ದಾಖಲಿಸಲಾಗಿದೆ. ಗುರಿಪಳ್ಳ ಚಾಲಕ ಕಾರನ್ನು ಉಜಿರೆ ಬೆಳಾಲು ಕ್ರಾಸ್ ನಿಂದ ತಪ್ಪಿಸಿಕೊಂಡು ಹೋಗಿ ಜನಾರ್ಧನ ಶಾಲೆ ಎದುರಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಯುವಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.









