






ಸೋಣoದೂರು: ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಸೋಣoದೂರು ಪಣಕಜೆ ಇದರ ಆಶ್ರಯದಲ್ಲಿ ಹಳೇ ವಿದ್ಯಾರ್ಥಿ ಸಂಘ ಸೋಣoದೂರು ಶಾಲೆ ಇದರ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಣoದೂರು ಇದರ ಅಭಿವೃದ್ಧಿಯ ಸಲುವಾಗಿ 6ನೇ ವರ್ಷದ 55 ಕೆಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬ್ಬಡಿ ಪಂದ್ಯಾಟ ಜ 25 ರoದು ಸೋಣoದೂರು ಶಾಲಾ ಮೈದಾನದಲ್ಲಿ ಜರಗಿತು.

ಪಂದ್ಯಾಟವನ್ನು ಸೋಣಂದೂರು ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಶ್ ಗೌಡ ಜಿ ಇವರ ಉದ್ಘಾಟಿಸಿದರು. ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಮೋಹನ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಂಗಣವನ್ನು ಮಂಜುನಾಥ ಪ್ರಭು ಮುಂಡಾಡಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ನಿಯಾಜ್ ಪಣಕಜೆ, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಭೇಬಿ ಸುವರ್ಣ, ಪಣಕಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ಮಜಲ್, ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಸುಕೇಶ್ ಕೆ ಮಾಲಾಡಿ. ಆಶಾ ಕಾರ್ಯಕರ್ತೆ ಸವಿತಾ ಸೀತಾರಾಮ್ ಪೂಜಾರಿ ಬರ್ನ, ಸಮಾಜ ಸೇವಕ ಉಪೇಂದ್ರ ಆಚಾರ್ಯ ಮುಂಡಾಡಿ. ಮಾಲಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಯುವ ಉದ್ಯಮಿಗಳಾದ ರೋಷನ್ ಲೋಬೊ ಪಣಕಜೆ, ಜಗದೀಶ್ ಆಚಾರ್ಯ ಮಡoತ್ಯಾರು ಉಪಸ್ಥಿತರಿದ್ದರು.



ಸಾಯಂಕಾಲ ಜರಗಿದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಬೆಳ್ತಂಗಡಿ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ರಾಜ್ಯಶೇಖರ್ ಶೆಟ್ಟಿ ಮಡಂತ್ಯಾರು, ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಸೆಂಟ್ರಲ್ ಕಮಿಟಿ ಇದರ ಉಪಾಧ್ಯಕ್ಷರಾದ ಲಿಯೋ ರೊಡ್ರಿಗಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್ ಮಾಲಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೇಡಿ, ಬಿಜೆಪಿ ಯುವ ಮೋರ್ಚಾ ಬಂಟ್ವಾಳ ಇದರ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಯುವ ಉದ್ಯಮಿ ಸಂಪತ್ ಶೆಟ್ಟಿ ಪಣಕಜೆ, ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು. ಕಾರ್ಯದರ್ಶಿ ಸಚಿನ್ ಸ್ವಾಗತಿಸಿ ಹರೀಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸoಘಟನೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಪoದ್ಯಾಟದ ಯಶಸ್ವಿಗೆ ಸಹಕರಿಸಿದರು. ಯೋಗೇಶ್ ಧನ್ಯವಾದ ನೀಡಿದರು.









