






ಕಲ್ಮಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರ ಪಜಿರಡ್ಕದಲ್ಲಿ ನೂತನ ಶಿಲಾಮಯ ಧ್ವಜಸ್ತಂಬ ಸ್ಥಾಪನೆಗೊಂಡಿದ್ದು ಜ. 31ರಿಂದ ಫೆ.6. ರವರೆಗೆ ನಡೆಯಲಿರುವ ಧ್ವಜಸ್ತಂಬ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ ಕಾರ್ಯಕ್ರಮದ ಮುಂಚಿತವಾಗಿ ಜ. 25ರಂದು ರಥಸಪ್ತಮಿಯ ದಿನದಂದು ಶಿಲ್ಪಿಗಳಾದ ಸುಧಾಕರ್ ಡೊಂಗ್ರೆ ಬಜಗೋಳಿ ಅವರಿಂದ ಧಾನಿಗಳಾದ ಸುಕನ್ಯಾ ಮತ್ತು ಡಿ.ಜಯರಾಮ ರಾವ್ ಮುಂಚಾನ ಕಲ್ಮಂಜ ಅವರಿಗೆ ಹಸ್ತಾಂತರಿಸಿ, ನಂತರ ಧಾನಿಗಳು ಕ್ಷೇತ್ರ ಅರ್ಚಕರು ಹಾಗೂ ಆಡಳಿತ ಮಂಡಳಿಯ ಮುಖಾಂತರ ಕ್ಷೇತ್ರಕ್ಕೆ ನೂತನ ದ್ವಜಸ್ತಂಭವನ್ನು ಸಮರ್ಪಣೆಗೊಳಿಸಿದರು.


ಊರಿನ ಪ್ರಮುಖರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಕನ್ಯಾಡಿ, ಪದಾಧಿಕಾರಿಗಳು, ಸದಸ್ಯರು, ಕ್ಷೇತ್ರದ ಭಕ್ತಾದಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









