






ಬೆಳ್ತಂಗಡಿ: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಫೆ. 6 ಮತ್ತು 7ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ ಅವರು ಬಿಡುಗಡೆಗೊಳಿಸಿದರು.



ದೇವಸ್ಥಾನದ ಪ್ರಧಾನ ಅರ್ಚಕ ಕಾರ್ತಿಕ್ ಹೆಗ್ಡೆ, ಪವಿತ್ರ ವಾಣಿ ಹರೀಶ್ ತಾಳಿಂಜ, ಸಹ ಮೋಕ್ತೇಸರರಾದ ಶ್ಯಾಮ್ ಭಟ್ ವಾದ್ಯ ಕೋಡಿ, ಉದಯ ತಾಳಿಂಜ, ಪ್ರಸನ್ನ ಗಾಣದ ಕೊಟ್ಯ, ಸೇಸಪ್ಪ ಗೌಡ ಮಜಿಕುಡೇಲು, ಜನಾರ್ಧನ ಗೌಡ ನಾಕಾಲು, ಸುನೀಲ್ ಗೌಡ ಅಣವು, ಸೇಸಪ್ಪ ರೈ ಕೊರಿಂಜ, ಪ್ರಕಾಶ್ ಪಾಂಗಣ್ಣಾಯ, ಸೀತಾರಾಮ ಆಳ್ವ ಕೊರಿಂಜ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಅಣವು, ಕಾರ್ಯದರ್ಶಿ ಕೇಶವತಿ ಉರುವಾಲು, ಜೊತೆ ಕಾರ್ಯದರ್ಶಿ ಗಣೇಶ್ ಗೌಡ ಬನಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರದೀಪ್ ನಾಯ್ಕ ಆನಡ್ಕ, ನವೀನ ಧರ್ಮಾಡಿ, ಮೋನಪ್ಪ ಗೌಡ ಸೂರಂಟೆ ಕೋಡಿ, ಅರ್ಚಕ ವೃಂದ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.









