ಧರ್ಮಸ್ಥಳ ಗ್ರಾಮದಲ್ಲಿ ನಡೆದ ೭೪ ಅಸಹಜ ಸಾವುಗಳ ಪ್ರಕರಣಕುಸುಮಾವತಿ ಸಲ್ಲಿಸಿದ್ದ ಪಿಐಎಲ್ ಹೈಕೋರ್ಟ್‌ನಲ್ಲಿ ವಿಚಾರಣೆ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ೭೪ ಅಸಹಜ ಸಾವುಗಳ ಪ್ರಕರಣದ ಕುರಿತು ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ ಸೂಚಿಸಬೇಕು ಎಂದು ಕು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಜ.೧೩ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ನಡೆಯಿತು. ಕುಸುಮಾವತಿ ಪರ ಹಿರಿಯ ವಕೀಲ ಎಸ್. ಬಾಲನ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಫೆ.೩ಕ್ಕೆ ಮುಂದೂಡಿಕೆ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಎಂಬ ಗ್ರಾಮದ ಸಣ್ಣ ಹೊರಠಾಣೆ ಪೊಲೀಸ್ ಠಾಣಾ ವ್ಯಾಪ್ತಿಯೊಂದರಲ್ಲೇ ೭೪ ಅಸಹಜ ಸಾವು ಪ್ರಕರಣಗಳು ಸಂಶಯಾಸ್ಪದವಾಗಿ ವರದಿಯಾಗಿದೆ. ಎಲ್ಲಿ ಶವ ಹೂತು ಹಾಕಿದ್ದು ಎನ್ನುವ ಮಾಹಿತಿ ಯಾವ ದಾಖಲೆಯಲ್ಲಿಯೂ ತಿಳಿಸಿಲ್ಲ. ಈ ಪ್ರಕರಣಗಳ ತನಿಖೆ ಮಾಡಲೆಂದೇ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಆದರೆ ಎಸ್‌ಐಟಿಯು ಕೇವಲ ಒಂದು ಎಫ್‌ಐಆರ್ ದಾಖಲಿಸಿದೆ. ಉಳಿದ ೭೪ ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಪೀಠದಲ್ಲಿ ಈ ಕುರಿತು ವಾದ ಮಂಡಿಸಿದ ಎಸ್. ಬಾಲನ್ ಅವರು ಒಂದು ಸಣ್ಣ ಗ್ರಾಮದಲ್ಲಿ ೭೪ ಅಸಹಜ ಸಾವು ಸಂಭವಿಸಿದ್ದು ಒಂದು ಎಫ್‌ಐಆರ್ ಮೂಲಕ ಅದರ ಕ್ರಿಮಿನಲ್ ವಿಚಾರಣೆ ನಡೆದಿದೆ.

ಇದು ಸರಿಯಾದ ಕ್ರಮವಲ್ಲ ಎಂದರು. ಈ ವೇಳೆ ಸರ್ಕಾರದ ಪರ ವಕೀಲರು ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಇನ್ನೂ ಪ್ರಕರಣದ ದಾಖಲೆ ಸಲ್ಲಿಸಿಲ್ಲ. ದಾಖಲೆ ಇಲ್ಲದೆ ಸರ್ಕಾರ ಅಭಿಪ್ರಾಯ ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ೭೪ ಅಸಹಜ ಸಾವುಗಳಿಗೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಲ್ಲ ಎನ್ನುವ ಪ್ರಕರಣದ ಅರ್ಜಿ ಇರುವುದು. ಸರ್ಕಾರವು ನ್ಯಾಯಾಲಯದಲ್ಲಿರುವ ದಾಖಲೆಯನ್ನೇ ಪಡೆದುಕೊಂಡು ಅಭಿಪ್ರಾಯ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದರು. ಅಲ್ಲದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಂದಿನ ವಿಚಾರಣೆಯನ್ನು ಫೆಬ್ರವರಿ ೩ಕ್ಕೆ ಮುಂದೂಡಿದರು.

ಅಸಹಜ ಸಾವುಗಳ ಸಂಪೂರ್ಣ ವಿವರ ನೀಡಿದ್ದೇವೆ: ಬಾಲನ್: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ 74 ಅಸಹಜ ಸಾವುಗಳ ಪ್ರಕರಣದ ಕುರಿತು ಪ್ರತ್ಯೇಕ ( ಎಫ್‌ಐಆರ್ ದಾಖಲಿಸಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದ್ದು ವಾದ ಮಂಡನೆಯಾಗಿದೆ. ನ್ಯಾಯಾಲಯದಲ್ಲಿ ಇರುವ ದಾಖಲೆಗಳನ್ನೇ ಪಡೆದುಕೊಂಡು ವಾದ ಮಂಡಿಸುವಂತೆ ಸರಕಾರಿ ವಕೀಲರಿಗೆ ಸೂಚನೆ ನೀಡಿ ಫೆಬ್ರವರಿ 3ಕ್ಕೆ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದ್ದಾರೆ. 74 ಅಸಹಜ ಸಾವುಗಳ ಸಂಪೂರ್ಣ ವಿವರವನ್ನು ನಾವು ನ್ಯಾಯಾಲಯಕ್ಕೆ ನೀಡಿದ್ದೇವೆ ಎಂದು ಹಿರಿಯ ನ್ಯಾಯವಾದಿ ಎಸ್. ಬಾಲನ್ ಅವರು ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.

ಎಫ್‌ಐಆ‌ರ್ ದಾಖಲಿಸಿದೆ. ಉಳಿದ 74 ಕೊಲೆ, ನಾಪತ್ತೆ, ಸಾವು ಪ್ರಕರಣಗಳಿಗೆ -ಎಸ್. ಬಾಲನ್

LEAVE A REPLY

Please enter your comment!
Please enter your name here