ಬೆಳಾಲು: ಪೆರಿಯಡ್ಕ ಸ. ಕಿ.ಪ್ರಾ. ಶಾಲೆ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ(ಬಿ) ಇದರ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ. 8ರoದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ರಜತ ಮಹೋತ್ಸವದ ಅಧ್ಯಕ್ಷ ಜಯಣ್ಣ ಗೌಡ ಮಿನಂದೇಲು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಳಾಲು ಗ್ರಾ. ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಬೆಳಾಲು ಗ್ರಾ. ಪಂ. ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ, ಗೌರವ ಸಲಹೆಗಾರ ಡೊಂಬಯ್ಯ ಗೌಡ ಕಾವಟೆ, ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರಸಾದ್ ಗೌಡ, ಚಿತ್ತಾರ ಯುವಶಕ್ತಿ ಬಳಗದ ಅಧ್ಯಕ್ಷ ಮಾಧವ ಗೌಡ, ಉಪಾಧ್ಯಕ್ಷ ದಿನೇಶ್ ಗೌಡ ಧರ್ಮದೋಡಿ, ಜಗದೀಶ್ ಜೈನ್ ಈರಂತ್ಯಾರು ಸೂರಪ್ಪ ಪೂಜಾರಿ ಅತ್ತಿದಡಿ, ಸೂರಪ್ಪ ಗೌಡ ಭಂಡಾರಿ ಮಜಲು, ಕಾರ್ಯದರ್ಶಿಗಳಾದ ಸಂತೋಷ ಮಡಿವಾಳ, ಸ್ವಾತಿ ಮರ್ವದಡಿ, ಶಾಲಾ ಮುಖ್ಯೋಪಾಧ್ಯಾಯನಿ ವಿಜಯ, ಸಹಶಿಕ್ಷಕಿ ಜಯಶ್ರೀ ಬಿ.ಕೆ., ಜ್ಞಾನದೀಪ ಶಿಕ್ಷಕಿ ಪ್ರವಲ್ಲಿಕ, ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here