ಬೆಳಾಲು: ಪೆರಿಯಡ್ಕ ಸ. ಕಿ. ಪ್ರಾ. ಶಾಲಾ ರಜತ ಮಹೋತ್ಸವ ಆಚರಣಾ ಸಮಿತಿ ರಚನೆ-ಅಧ್ಯಕ್ಷರಾಗಿ ಜಯಣ್ಣ ಗೌಡ ಮಿನಂದೇಲು

0

ಬೆಳಾಲು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ(ಬಿ) ಸ್ಥಾಪನೆಗೊಂಡು 25 ವರ್ಷಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಜತ ಮಹೋತ್ಸವ ಆಚರಿಸುವ ಬಗ್ಗೆ ಡಿ. 27ರಂದು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ರಜತ ಮಹೋತ್ಸವ ಸಮಿತಿಯನ್ನು ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಉದ್ಯಮಿ ಜಯಣ್ಣ ಗೌಡ ಮಿನಂದೇಲು, ಪ್ರಧಾನ ಸಂಚಾಲಕರಾಗಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕಿ ವಿಜಯ ಅವರನ್ನು ಆಯ್ಕೆ ಮಾಡಲಾಯಿತು.

ಗೌರವ ಮಾರ್ಗದರ್ಶಕರಾಗಿ ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಗೌರವಾಧ್ಯಕ್ಷರಾಗಿ ಉಜಿರೆ ಶ್ರೀ ಲಕ್ಷ್ಮಿ ಗ್ರೂಪ್ ಮೋಹನ್ ಕುಮಾರ್, ಕಾರ್ಯದರ್ಶಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ, ಸಂತೋಷ ಮಡಿವಾಳ, ಸ್ವಾತಿ ಮರ್ವದಡಿ, ಉಪಾಧ್ಯಕ್ಷರಾಗಿ ದಿನೇಶ್ ಗೌಡ ಧರ್ಮದೋಡಿ, ಜಗದೀಶ್ ಜೈನ್ ಈರಂತ್ಯಾರು, ದಿನೇಶ್ ಇರಿಂಬಿತ್ತಿಲು, ಸೂರಪ್ಪ ಪೂಜಾರಿ ಅತ್ತಿದಡಿ,
ಸೂರಪ್ಪ ಗೌಡ ಭಂಡಾರಿ ಮಜಲು, ಕೋಶಾಧಿಕಾರಿಯಾಗಿ ಶ ಜಯಶ್ರೀ ಬಿ.ಕೆ. ಸಹ ಶಿಕ್ಷಕಿ ಅವರನ್ನು ಆಯ್ಕೆ ಮಾಡಲಾಯಿತು. ಹಾಗೂ ವಿವಿಧ ಸಮಿತಿಗಳ ಸಂಚಾಲಕರು, ಸಹಸಂಚಾಲಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here