








ಪಡಂಗಡಿ: ತಾಲೂಕಿನ ಪಡಂಗಡಿ ಗ್ರಾಮದ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಫೆ.3ರಿಂದ 7ರವರೆಗೆ ನಡೆಯಲಿದ್ದು ಇದರ ಆಮಂತ್ರರಣ ಪತ್ರಿಕೆಯನ್ನು ಜ.12ರಂದು ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ್ ಭಟ್ ಬಿಡುಗಡೆ ಮಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೋಂಡೆಮಾರು, ಸದಸ್ಯರಾದ ಸತೀಶ್ ಬಂಗೇರ ಕುವೆಟ್ಟು, ಶಾಂಭಾವಿ ಬಂಗೇರ, ಕುಶಲಪ್ಪ ಕಿನ್ನಿಗೋಳಿ ಹಾಗೂ ಅರ್ಚಕರಾದ ವಿಷ್ಣು ಪ್ರಸಾದ್, ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.









