






ಬೆಳ್ತಂಗಡಿ: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ”ಹಿಂದೂ ಸಂಗಮ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವೇಣೂರು ತಾಲೂಕಿನ ಬಳಂಜ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮವು ಜ.25ರಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಕೆ ವಸಂತ ಸಾಲ್ಯಾನ್ ಕಾಫಿ ನಡ್ಕ ಜ.11ರಂದು ಬಿಡುಗಡೆ ಮಾಡಿದರು.


ವೇಣೂರು ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಉಪಾಧ್ಯಕ್ಷರಾದ ನವೀನ್ ಸಾಮಾನಿ ಕರಂಬಾರು, ನಿತ್ಯಾನಂದ ನೊಚ್ಚ, ಸಂಚಾಲಕರಾದ ರಾಕೇಶ್ ಹೆಗ್ಡೆ, ಕೋಶಾಧಿಕಾರಿಗಳಾದ ರಾಘವೇಂದ್ರ ಭಟ್, ರಕ್ಷಿತ್ ಕರಂಬಾರು, ಪ್ರಮುಖರಾದ ಸಂತೋಷ್ ಕಾಪಿನಡ್ಕ, ಶ್ರೀನಿವಾಸ ರೈ ಕಾರಂದೂರು, ಪ್ರಶಾಂತ್ ಕರಂಬಾರು, ರಮೇಶ್ ಬಜನೋಡಿ, ವಿದ್ಯಾನಂದ ಲೀಲಾವತಿ, ಪ್ರಕಾಶ್ ಆಚಾರ್ಯ, ಸೋಮನಾಥ ಶಿರ್ಲಾಲು, ಸದಾನಂದ ಉಂಗಿಲಬೈಲು, ಸುಧೀರ್ ಸುವರ್ಣ ಉಪಸ್ಥಿತರಿದ್ದರು. ಗುಂಡೇರಿ ಆವರಣದಿಂದ ಶ್ರೀ ವಿಷ್ಣಮೂರ್ತಿ ದೇವಸ್ಥಾನದವರೆಗೆ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಲಿದೆ.









