






ಕಳೆಂಜ: ಜ.22ಮತ್ತು 24ರಂದು ಶ್ರೀ ಸದಾಶಿವೇಶ್ವರ ದೇವರ ಜಾತ್ರಾಮಹೋತ್ಸವ ಮತ್ತು ಧರ್ಮ ದೈವಗಳ ನೇಮೋತ್ಸವ ನಡೆಯಲಿದೆ. ಆ ಪ್ರಯುಕ್ತ ದೇವರ ಸನ್ನಿದಾನದಲ್ಲಿ ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.



ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ, ವಸಂತ ಪೂಜಾರಿ, ಟೊಕ್ಕಯ್ಯ ಗೌಡ, ಅಕ್ಕುಲ್ಲಾರು, ಗೋವಿಂದ ಗೌಡ ಕೊಳಂಬೆ, ಮಹೇಶ್ ಕೊಳಂಬೆ, ಬಾಲಣ್ಣ ಗೌಡ ಬದಿಮಾರು, ಡಾಕ್ಟರ್ ಜಯ ಕೀರ್ತಿ ಜೈನ್ ಉಪಸ್ಥಿತರಿದ್ದರು.









