ಬೆಳಾಲು: ಮಾಯ ಮಹದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಮಾಲೋಚನಾ ಸಭೆ

0

ಬೆಳಾಲು: ಮಾಯ ಶ್ರೀ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆ. 27ರಿಂದ ಮಾ. 3ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ಊರ ಭಕ್ತರ ಸಮಾಲೋಚನಾ ಸಭೆ ಜ. 11ರಂದು ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಾತ್ರೋತ್ಸವ ಯಶಸ್ವಿಯಾಗಿ ನಡೆಯಲು ಉಪ ಸಮಿತಿ ರಚನೆ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಸಿ ಹಾಜರಿದ್ದವರು ಸಲಹೆ ಸೂಚನೆ ನೀಡಿದರು.

ಸಭೆಯಲ್ಲಿ ಮಾಯಗುತ್ತು ಪುಷ್ಪದಂತ ಜೈನ್, ದೇವಸ್ಥಾನದ ಅಸ್ರನ್ನ ಗಣೇಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪ್ರಧಾನ ಅರ್ಚಕ ಕೇಶವ ರಾಮಯಾಜಿ, ದಾಮೋದರ ಗೌಡ ಸುರುಳಿ, ಸುರೇಶ್ ಭಟ್ ಪರಂಗಾಜೆ, ದಯಾನಂದ ಪಿ., ರಾಜಪ್ಪ ಗೌಡ, ದಿನೇಶ್ ಎಂ.ಕೆ., ವಾರಿಜ ಗುಂಡ್ಯ, ಕವಿತಾ ಉಮೇಶ್, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಸೇವಾ ಪ್ರತಿನಿಧಿ ಪ್ರಭಾವತಿ ದಿನೇಶ್, ಅನಂತೋಡಿ ಶ್ರೀ ಅನಂತ ಪದ್ಮನಾಭಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಮಾಯ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಆಚಾರ್ಯ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ, ವರ ಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಸುಲೋಚನಾ ಸುರೇಶ್, ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಮೋಹನ ಬಂಗೇರ, ಅಯ್ಯಪ್ಪ ಭಕ್ತ ವೃಂದ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಿಬ್ಬಂದಿ, ವಿಲಯದವರು, ಊರವರು ಹಾಜರಿದ್ದು ಸಲಹೆ ಸೂಚನೆ ನೀಡಿದರು.

ಉಮೇಶ್ ಮಂಜೊತ್ತು ಸ್ವಾಗತಿಸಿದರು ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲಿಮಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here