






ವೇಣೂರು: ಶಿವಾಜಿ ನಗರದ ಜನತಾ ಕಾಲೋನಿಯ ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರದ ಜೀರ್ಣೋದ್ದಾರ ಮತ್ತು ಅಭಿವೃದ್ದಿಯ ಕಾರ್ಯಗಳಿಗೆ ಸಂಬಂದಿಸಿದ ವಿಜ್ಞಾಪನಾ ಪತ್ರವನ್ನು ಡಿ.31ರಂದು ಗಣಹೋಮ, ಸರಸ್ವತಿ ಪೂಜೆ , ಶ್ರೀದೇವಿ ಆದಿಶಕ್ತಿ ಅಮ್ಮನವರಿಗೆ ಮಹಾಪೂಜೆಯೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಭಜನಾ ಮಂದಿರದ ಆದಿಶಕ್ತಿ ಕಲಾ ಭವನದಲ್ಲಿ ವಿಜ್ಞಾಪನಾ ಪತ್ರ ವನ್ನು ಬಿಡುಗಡೆ ಗೊಳಿಸಲಾಯಿತು.


ಈ ಕಾರ್ಯಕ್ರಮದಲ್ಲಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ ಖಂಡಿಗ, ತಾಲೂಕು ಮಾಜಿ ಪಂಚಾಯತ್ ಸದಸ್ಯ ವಿಜಯ ಗೌಡ, ಗ್ರಾ. ಪಂ. ಸದಸ್ಯ ಲೋಕಯ್ಯ ಪೂಜಾರಿ, ಗ್ರಾ. ಪಂ. ಮಾಜಿ ಅಧ್ಯಕ್ಷರು . ಸತೀಶ್ ಹೆಗ್ಡೆ, ಗ್ರಾ ಪಂ. ಸದಸ್ಯ ನೇಮಯ್ಯ ಕುಲಾಲ್, ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನೆಯ ವೇಣೂರು ವಲಯ ಮೇಲ್ವಿಚಾರಕಿ ಶಾಲಿನಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಸೇವಾ ಪ್ರತಿನಿದಿ ಜಯಂತಿ, ಭಜನಾ ಮಂದಿರದ ಸಂಚಾಲಕ ಶಂಕರ. ಎಸ್, ಗೌರವಾಧ್ಯಕ್ಷ ಶಿವಪ್ಪ ಕೊಳಚಲ, ಅಧ್ಯಕ್ಷ ಯೋಗೀಶ್ ಕೆ.ಬಿ. ಉಪಸ್ಥಿತರಿದ್ದರು
ಪ್ರಸ್ತಾವಿಕ ಸಂಚಾಲಕ ಶಂಕರ ಎಸ್. ಮಾತನಾಡಿದರು. ಸದಾಶಿವ. ಡಿ. ಸ್ವಾಗತಿಸಿ, ಶೇಖರ್ ವಿ. ಜಿ. ಧನ್ಯವಾದ ಸಲ್ಲಿಸಿದರು.









