ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಕಲ್ಮಂಜ: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜ.14ರಂದು ನಡೆಯಲಿರುವ ಮಕರ ಸಂಕ್ರಮಣ ಹಾಗೂ ಜ. 31ರಿಂದ ಫೆ. 6ರವರೆಗೆ ನಡೆಯಲಿರುವ ದ್ವಜಸ್ಥಂಭ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ವಾರ್ಷಿಕ ಜಾತ್ರೆ, ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು ಇದರ ಅಂಗವಾಗಿ ಮಕರ ಸಂಕ್ರಮಣ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘ ಧರ್ಮಸ್ಥಳ ವಲಯದ ಕನ್ಯಾಡಿ, ಕಲ್ಮಂಜ ಸತ್ಯನಪಲ್ಕೆ ಸದಸ್ಯರಿಂದ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಜ. 11ರಂದು ನಡೆಯಿತು.

ಒಕ್ಕೂಟದ ಸೇವಾ ಪ್ರತಿನಿಧಿ ಪ್ರಮೀಳಾ, ಸತ್ಯನಪಲ್ಕೆ ವಲಯದ ಅಧ್ಯಕ್ಷ ಜಯಂತ್ ರಾವ್ ಕೊತ್ತಳಿಕೆ ಮತ್ತು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಧಾಕೃಷ್ಣ ಗೌಡ, ಸದಸ್ಯರು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನೀಲ್ ಕನ್ಯಾಡಿ ಪದಾಧಿಕಾರಿಗಳು ಕ್ಷೇತ್ರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here