ಮಡಂತ್ಯಾರು: ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ-ಬಾಂಗ್ಲಾದಲ್ಲಿನ ಹಿಂದೂ ಹತ್ಯೆ ಖಂಡಿಸಿ ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ

0

ಮಡಂತ್ಯಾರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಅಂಗವಾಗಿ ಮಡಂತ್ಯಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂ ಹತ್ಯೆ ಖಂಡಿಸಿ ಹಿಂದೂಗಳ ರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ಜ.10ರಂದು ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ನಡೆಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಹಿಂದೂ ಸಂಗಮ ತಾಲೂಕು ಆಯೋಜನಾ ಸಮಿತಿ ಕಾರ್ಯದರ್ಶಿ ವಸಂತ ಮರಕಡ, ಮಡಂತ್ಯಾರು ಮಂಡಲ ನಿರ್ವಹಣಾ ಸಮಿತಿಯ ಸಂಯೋಜಕ ಶ್ರೀಕಾಂತ್ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಹಟತ್ತೋಡಿ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರಮುಖರಾದ ಪ್ರಭಾಕರ ಮುದಲಡ್ಕ, ಸತೀಶ್ ಮರಕಡ, ಅವಿನಾಶ್, ಚಂದ್ರಕಾಂತ ನಿಡ್ಡಾಜೆ,ವಿಜಯ ಸಾಲಿಯಾನ್, ನಾರಾಯಣ ಶೆಟ್ಟಿ ನೆತ್ತರ, ಹಾಗೂ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here