






ಬೆಳ್ತಂಗಡಿ: ಗುರುವಾಯನಕೆರೆ ಶಕ್ತಿನಗರ ನವಶಕ್ತಿಯ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಮಾಲಕತ್ವದ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿದೆ. ಗುಜರಾತಿನ ವಡೋದರದ ಬಿ ಸಿ ಎ ಸ್ಟೇಡಿಯಂನಲ್ಲಿ ಜ.11ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಶಶಿಧರ್ ಶೆಟ್ಟಿ ಮಾಲಕತ್ವದ ಸಂಸ್ಥೆ ಅಧಿಕೃತ ಫುಡ್ ಪಾರ್ಟ್ನರ್ ಆಗಿ ಆಯ್ಕೆಯಾಗಿದ್ದಾರೆ.



ಇದು ಸಂಸ್ಥೆಗೆ ಸಿಕ್ಕ ಹೆಮ್ಮೆಯ ಜವಾಬ್ದಾರಿ, ಇದು ಸಂಸ್ಥೆಗೆ ಸಂತಸ ನೀಡಿದೆ. ಈ ಪಂದ್ಯಕ್ಕಾಗಿ 150 ಪರಿಣಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ಸುದ್ದಿಗೆ ತಿಳಿಸಿದ್ದಾರೆ










Hearty Congratulations for healthy food service to our cricket lovers our Karnataka people nent for godly service to India wherever they are . Almighty Support Their Food Supply NIRANTARA