ಜ.10-11: ಮೇಲಂತಬೆಟ್ಟು ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮ ಮಂಡಲ ಸೇವೆ

0

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಜ.10 ಮತ್ತು 11ರಂದು ಲೋಕ ಕಲ್ಯಾಣಾರ್ಥವಾಗಿ ಮಡಂತ್ಯಾರು ವೇದಮೂರ್ತಿ ಮುಂಡೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಶತ ಸಂಖ್ಯೆ ನಾರಿಕೇಳ ಶ್ರೀ ಮಹಾಗಣಪತಿ ಹವನ ನಾಗತನುತರ್ಪಣ ಹಾಗೂ ನಾಗಬ್ರಹ್ಮ ಮಂಡಲ ಸೇವೆ ನಡೆಯಲಿದೆ.

ಜ.10ರಂದು ಬೆಳಿಗ್ಗೆ ಶ್ರೀ ನಾಗಬ್ರಹ್ಮದೇವರ ಸನ್ನಿಧಿಯಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸಪ್ತ ಶುದ್ಧಿ, ಪಂಚಾಮೃತ ಅಭಿಷೇಕ ಪ್ರದಾನ ಹೋಮ, ಕಲಶ ಪೂರಣೆ, ಕಲಶ ಅಭಿಷೇಕ, ಗಣಪತಿಯ ಅಥರ್ವ ಶೀರ್ಷ ಪಾರಾಯಣ, ಸ್ಥಳದ ದೈವಗಳಿಗೆ ಕಲಶಾಭಿಷೇಕ ಪಂಚಪರ್ವ, ಮಧ್ಯಾಹ್ನ ಅಷ್ಟೋತ್ತರ ಶತ ಸಂಖ್ಯೆ ನಾರಿಕೇಳ ಶ್ರೀ ಮಹಾ ಗಣಪತಿ ಹವನ, ಪೂರ್ಣಾಹುತಿ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ನಾಗಬ್ರಹ್ಮನಿಗೆ ತನು ತರ್ಪಣ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

ಜ.11ರಂದು ಬೆಳಿಗ್ಗೆ ನಾಗಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ನಾಗಕಟ್ಟೆಯಲ್ಲಿ ಪಂಚಾಮೃತ ಅಭಿಷೇಕ ತಂಬಿಲ, ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ, ನರಸಿಂಹ ದೇವರ ಕಟ್ಟೆಯಲ್ಲಿ ಪ್ರಾರ್ಥನೆ ಹಾಗೂ ಪೂಜೆ, ಕುರ್ತೋಡಿಯ ಕರ್ತಜ್ಜನಿಗೆ ಹೂ ಹಣ್ಣು ಇಟ್ಟು ಪ್ರಾರ್ಥನೆ, ಶ್ರೀ ನಾಗಬ್ರಹ್ಮ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗಬ್ರಹ್ಮ ಮಂಡಲ ವೇದಿಕೆಯ ಮಂಟಪ ಸಂಸ್ಕಾರ, ಮಂಜಸೇವೆ ದರ್ಶನ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ನಾಗಬ್ರಹ್ಮ ದೇವರಿಗೆ ಹಾಲಿಟ್ಟು ಸೇವೆ, ನಾಗನಕಟ್ಟೆಯಲ್ಲಿ ಹಾಲಿಟ್ಟು ಸೇವೆ, ಗೋಪಾಲಕೃಷ್ಣ ತಂತ್ರಿಗಳಿಂದ ನಾಗಬ್ರಹ್ಮ ಮಂಡಲ, ಪೂಜೆ ರಾತ್ರಿ ೮ರಿಂದ ನಾಗಪಾತ್ರಿ ಕಲಂಗಳ ಶ್ರೀರಾಮಚಂದ್ರ ಕುಂಜಿತ್ತಾಯ, ಕೃಷ್ಣಪ್ರಸಾದ ವೈದ್ಯ ಮತ್ತು ಬಳಗ ಅವರ ನೇತೃತ್ವದಲ್ಲಿ ನಾಗಕನ್ನಿಕೆಯಾಗಿ ಶ್ರೀ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯ ಅವರಿಂದ ನಾಗಮಂಡಲ ಸೇವೆ ನಡೆಯಲಿದೆ.

ಈ ಎಲ್ಲಾ ಶುಭ ಕಾರ್ಯಗಳಿಗೆ ಸಕುಟುಂಬಿಕರಾಗಿ ಆಗಮಿಸಿ ಕಾರ್ಯಕ್ರಮದ ಪುಣ್ಯ ಫಲ ಪ್ರಾಪ್ತಿಯಲ್ಲಿ ಸಹಭಾಗಿತ್ವ ವಹಿಸಬೇಕಾಗಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here