ಶಿಬಾಜೆ: ಫೆ.5-6 ರಂದು ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ಸನ್ನಿದಿಯಲ್ಲಿ ನಡೆಯುವ ಶತ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ: ಶ್ರೀ ಕ್ಷೇತ್ರದಲ್ಲಿ 64ವರ್ಷದ ಬಳಿಕ ನಡೆಯುತ್ತಿರುವ ಯಾಗ

0

ಶಿಬಾಜೆ: ಮೊಂಟೆತ್ತಡ್ಕ ದುರ್ಗಾ ಪರಮೇಶ್ವರಿ ದೇವರ ಸನ್ನಿದಾನದಲ್ಲಿ ಫೆ. 5ಮತ್ತು 6ರಂದು ಶತ ಚಂಡಿಕಾ ಯಾಗ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ದೇವಿಯ ಪೂಜೆ ನಡೆದ ಬಳಿಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ದೇವಳದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ, ಸಮಿತಿಯ ಸದಸ್ಯರಾದ ಗಂಗಾಧರ ಗೌಡ, ಸುಂದರ ಮಲೆಕುಡಿಯ, ಇ.ವಿ. ಸತೀಶ್, ಶೀಲಾ, ವಸಂತ ಗೌಡ ಕಲ್ಲಾಜೆ, ಯಾಗ ಸಮಿತಿಯ ಕಾರ್ಯಧ್ಯಕ್ಷ ಗಣೇಶ್ ಗೋಖಲೆ, ಗೋಪು ಗೋಖಲೆ, ಅವಿನಾಶ್ ಗೋಖಲೆ, ರಮೇಶ್ ಅಭ್ಯಂಕರ್, ವೃಶಾಂಕ್ ಖಾಡಿಲ್ಕರ್, ಸುಧೀರ್ ಕುಮಾರ್ ಎಂ.ಎಸ್ ಅಡ್ಕಾರಿ, ಧರ್ಮರಾಜ್ ಗೌಡ ಅಡ್ಕಾಡಿ, ಎಚ್. ಎಸ್ ಚೆನ್ನಪ್ಪ ಗೌಡ, ಶಾರದಾ ಪುರುಷೋತ್ತಮ್, ವತ್ಸಲಾ ಉಪಾಧ್ಯಾಯ, ರೇಣುಕಾ ಸುಧೀರ್, ಪುರುಷೋತ್ತಮ್ ಅಭ್ಯಂಕರ್ ಬೂಡುಮುಗೇರು, ಯೋಗೀಶ್ ಬೇಂಗಳ ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ನಡೆಯುವ ಶತ ಚಂಡಿಕಾ ಯಾಗದ ಪೂರ್ವ ತಯಾರಿಯಾಗಿ ಕ್ಷೇತ್ರದ ಸಾನಿಧ್ಯ ವೃದ್ದಿಗಾಗಿ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮ ಅರ್ಚನೆ ನಡೆಯಿತು.

LEAVE A REPLY

Please enter your comment!
Please enter your name here