








ವೇಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ದಕ್ಷಿಣ ಕನ್ನಡ) ವತಿಯಿಂದ ಮೂರನೇ ಬಾರಿಗೆ ಕ್ಯಾಂಪ್ಕೋ ನಿರ್ದೇಶಕರಾಗಿ ಆಯ್ಕೆಯಾದ ದಯಾನಂದ ಹೆಗ್ಡೆ ಅವರನ್ನು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಜಯಂತ್ ಅವರು ಸನ್ಮಾನಿಸಿದರು. ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತೀಯ ವ್ಯವಸ್ಥಾಪಕ ನಿತಿನ್ ಕೋಟ್ಯಾನ್ ಹಾಗೂ ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ರಾಜ್ ಎಂ. ಅವರು ಉಪಸ್ಥಿತರಿದ್ದರು.









