








ಕೊಕ್ಕಡ: ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ ಫೆ. 1ರಂದು ಕೊಕ್ಕಡ ಶ್ರೀ ರಾಮ ಸೇವಾ ಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಕಾರದಿಂದ ಜರಗುವ ದಿ| ಸುಹಾಸ್ ಶೆಟ್ಟಿ ಬಜ್ಪೆ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಶ್ರೀ ವ್ಯೆದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಕೊಕ್ಕಡ ಟೀಂ ಸುಹಾಸ್ ಶೆಟ್ಟಿ ಸದಸ್ಯರಾದ ಸಚಿನ್ ಬಜ, ರಂಜು ಕೊಕ್ಕಡ, ದೀಕ್ಷಿತ್ ಕೊಕ್ಕಡ, ಯತೀಶ್ ಕೊಕ್ಕಡ, ಸದಾನಂದ ಕೊಕ್ಕಡ, ಸಂದೀಪ್ ಭಂಡಾರಿ, ಪವನ್ ಪೆಲತ್ತಿಂಜ ಉಪಸ್ಥಿತರಿದ್ದರು.









