






ಕೊಕ್ಕಡ: ಸುಂದರಿ ಕುಂಞಪ್ಪಗೌಡ ಕೊಲ್ಲಾಜೆಪಳಿಕೆ ಕೊಕ್ಕಡ ಅವರು ರೂ. 1,50,111 ಮೊತ್ತವನ್ನು ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ.


ಈ ಮೊದಲು ಅನೇಕ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತವನ್ನು ಚಾಚುತ್ತಾ ಬರುತ್ತಿದ್ದು ಇದೀಗ ನೂತನ ಮಂದಿರ ನಿರ್ಮಾಣದ ಕಾರ್ಯದಲ್ಲಿ ದೊಡ್ಡ ಮೊತ್ತವನ್ನು ನೀಡಿ ಸಹಕರಿಸಿರುತ್ತಾರೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರುಕ್ಮಯ ಮಡಿವಾಳ, ಕಾರ್ಯದರ್ಶಿ ಲೊಕೇಶ್ ಕೆಂಪಕೋಡಿ, ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಕೊಡಿಂಗೇರಿ, ಶಶಿ ತಿಪ್ಪಮಜಲು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.









