ಮೂಡಾಯಿಪಲ್ಕೆ: ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಹಾಗೂ ದೈವೋತ್ಸವ

0

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಪರಪ್ಪು ಸಮೀಪವಿರುವ ಮೂಡಾಯಿಪಲ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ಪುಣ್ಯಕ್ಷೇತ್ರದಲ್ಲಿ ದನದ ಹಟ್ಟಿಯ ಎದುರುಗಡೆ ಶಿವಲಿಂಗ ಉಧ್ಭವಿಸಿದ ದಿನದ ೮ನೇ ವರ್ಷದ ದಿನವಾದ ಡಿ.28ರಂದು ವಿಶೇಷ ಪೂಜಾ ವಿಧಿವಿಧಾನದೊಂದಿಗೆ ವರ್ಷಾವಧಿ ಜಾತ್ರೆ ಹಾಗೂ ದೈವೋತ್ಸವ ನಡೆಯಿತು.

ಬೆಳಗ್ಗಿನಿಂದ ರಾತ್ರಿ 7 ಗಂಟೆಯವರೆಗೆ ಉಜಿರೆ ಓಂಕಾರೇಶ್ವರ ಭಜನಾ ಸಂಘ ಪಜಿರಡ್ಕ, ಕಣಿಯೂರು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಪಿಲಿಗೂಡು ಹಾಗೂ ಕೊಕ್ಕಡದ ಶ್ರೀ ಚಾಮುಂಡೇಶ್ವರಿ ಭಜನಾ ಸಂಘ ಪಟ್ಲಡ್ಕ ಅವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಗಂಟೆ 7 ರಿಂದ ೧೦ರವರೆಗೆ ಬೆಳ್ತಂಗಡಿ ಆಚಾರ್ಯ ಕಲಾಸಂಘದಿಂದ ಭಕ್ತಿ ರಸಮಂಜರಿ ನಡೆಯಿತು. ಈ ನಾಲ್ಕು ತಂಡವನ್ನು ಶ್ರೀ ದೇವರ ಸನ್ನಿಧಾನದಲ್ಲಿ ದೇವರ ಪ್ರಸಾದ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬೆಸ್ಟ್ ಫೌಂಡೇಶನ್ ಅಧಕ್ಷ ರಕ್ಷಿತ್ ಶಿವರಾಮ್ ಅವರನ್ನು ದೇವರ ಪ್ರಸಾದ, ಫಲಪುಷ್ಪ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಡಿ.29ರಂದು ಹಾಗೂ ೩೦ರಂದು ದೈವಗಳಿಗೆ ಪರ್ವಸೇವೆ, ಅಗೇಲು ಸೇವೆ ಮತ್ತು ದೈವೋತ್ಸವ ನಡೆಯಿತು.

LEAVE A REPLY

Please enter your comment!
Please enter your name here