ಉಜಿರೆ: ಗ್ರಾ.ಪಂ. ಮಲ ತ್ಯಾಜ್ಯ ಘಟಕ ನಿರ್ವಹಣೆ: ಕೇಂದ್ರ ಸಚಿವರೊಂದಿಗೆ ಸಂವಾದ

0

ಉಜಿರೆ: ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಉಜಿರೆ ಗ್ರಾಮದ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಜಲಶಕ್ತಿ ಖಾತೆ ಸಚಿವ ಸಿ. ಆ‌ರ್.ಪಾಟೀಲ್, ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಅನುಭವ ಹಂಚಿಕೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ವಿಡಿಯೊ ಕಾನರನ್ಸ್ ಮೂಲಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮತ್ತು ” ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಭಾರಿ ಮಾಹಿತಿ ನೀಡಿದರು.

ಯೋಜನೆ ‘ಗ್ರಾಮೀಣಾಭಿವೃದ್ಧಿ ಗಳನ್ನು ಸಮರ್ಪಕವಾಗಿ ಅನುಷ್ಠಾನ ತರಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗ ಪಡೆಯ ಬೇಕು. ಈ ಯೋಜನೆಗಳನ್ನು ಜಾರಿಗೆ ತರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ ಎಂಬುದನ್ನು ಶಿವರಿಗೆ ತಿಳಿಸಬೇಕು,” ಎಂದು ಸಚಿವ ಸೋಮಣ್ಣ ಹೇಳಿದರು.

ದೇಶದ ಆಯ್ದ ರಾಜ್ಯಗಳ ಮಲ ತ್ಯಾಜ್ಯ ನಿರ್ವಹಣೆ ಕುರಿತು ನಡೆದ ಸಂವಾದದಲ್ಲಿ ಕರ್ನಾಟಕದಿಂದ ಉಜಿರೆ ಗ್ರಾಪಂ ಮಾತ್ರ ಆಯ್ಕೆ ಮಾಡಲಾಗಿತ್ತು. ಗ್ರಾಮದಲ್ಲಿ ಅನುಷ್ಠಾನ ಮಾಡಿರುವ ಮಲ ತ್ಯಾಜ್ಯ ಘಟಕ ಬಗ್ಗೆ ಪಿಪಿಟಿ ಮೂಲಕ ಸಚಿವರಿಗೆ ಅನುಭವ ಪ್ರಸ್ತುತಪಡಿಸಲಾಯಿತು.

ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್, ಪಿಡಿಒ ಪ್ರಕಾಶ್ ಶೆಟ್ಟಿ, ಸಂಜೀವಿನಿ ಒಕ್ಕೂಟದ ಸದಸ್ಯೆ ದೇಜಮ್ಮ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಕಾರಿ ಎಂಜಿನಿಯರ್ ಜೈಪ್ರಕಾಶ್, ಸ್ವಚ್ಛಭಾರತ್ ಸಮಾಲೋಚಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here