







ಬೆಳ್ತಂಗಡಿ: ತಾಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಸರುವಾಸಿಯಾಗಿರುವ ನೇತ್ರಾವತಿ, ಬಂಡಾಜೆ ಮತ್ತು ಗಡಾಯಿಕಲ್ಲು ಚಾರಣಕ್ಕೆ ಹಾಗೂ ಕಡಮಗುಂಡಿ ಮತ್ತು ಬೊಳ್ಳೆ ಜಲಪಾತ ವೀಕ್ಷಣೆಗೆ ಜ.5ರಿಂದ ನಿರ್ಬಂಧ ಹೇರಲಾಗಿದೆ.


ಜ.13 & 14ರಂದು ವೀಕ್ಷಣೆಗೆ ಪುನರಾರಂಭ: ಜ.13ರಂದು ನೇತ್ರಾವತಿ ಹಾಗೂ ಬಂಡಾಜೆ ಚಾರಣವು ಪುನರಾರಂಭ ಆಗಲಿದ್ದು, ಜ.14ರ ನಂತರ ಗಡಾಯಿಕಲ್ಲು, ಬೊಳ್ಳೆ ಜಲಪಾತ ಹಾಗೂ ಕಡಮಗುಂಡಿ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.









