ಕಲ್ಮಂಜ: ದ.ಕ.ಜಿ.ಪಂ. ಸ. ಹಿ.ಪ್ರಾ. ಶಾಲೆಯ ಶತ ಸಂಭ್ರಮ ಕಾರ್ಯಕ್ರಮ-ಜ್ಞಾನದೀಪ ನೂತನ ಸಭಾಂಗಣ ಲೋಕಾರ್ಪಣೆ

0

ಕಲ್ಮಂಜ: ಕರ್ನಾಟಕ ಸರ್ಕಾರ ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಕಲ್ಮoಜ ದ.ಕ.ಜಿ.ಪo.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತ ಸಂಭ್ರಮ ಕಾರ್ಯಕ್ರಮ ಜ. 3ಮತ್ತು 4ರಂದು ನಡೆಯಲಿದ್ದು, ‘ಜ್ಞಾನದೀಪ’ ನೂತನ ಸಭಾಂಗಣ ಲೋಕಾರ್ಪಣೆ ಚಿಣ್ಣರ ಉತ್ಸವ, ಗುರು ನಮನ, ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಯಲಿದೆ.

ಜ. 3ರಂದು ಶತಮಾನೋತ್ಸವ ಸಮಿತಿ ಗೌರವ ಮಾರ್ಗದರ್ಶಕರು ಆಡಳಿತ ಮೊಕ್ತೇಸರರು, ಶ್ರೀ ಶಾಂತಿನಾಥ ಸ್ವಾಮಿ ಜೈನ ಬಸದಿ ನಿಡಿಗಲ್ ಅವರು ನೆರವೇರಿಸುವರು. ರತನ್ ಕುಮಾರ್ ಜೈನ್, ಹುನಿಪ್ಪಾಜೆಗುತ್ತು ಧ್ವಜಾರೋಹಣ ನೆರವೇರಿಸಿ “ಜ್ಞಾನದೀಪ ಸಭಾಂಗಣ’ ಲೋಕಾರ್ಪಣೆ ಮಾಡಿದರು. ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರೆ. ಫಾ। ವಿಜಯ ಲೋಬೋ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಪದ್ಮನಾಭ ಸಾಲಿಯಾನ್, ಕಲ್ಮಂಜ ಗ್ರಾ.ಪಂ. ಅಧ್ಯಕ್ಷೆ ವಿಮಲಾ ಗೌಡ, ನಿಡಿಗಲ್ ಸುಪ್ರಿಯ ವುಡ್ ಇಂಡಸ್ಟ್ರೀಸ್ ಮಾಲಕ ಮಹಮ್ಮದ್ ಮುಜೀಬ್, ಮುಂಡಾಜೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರಕಾಶ್ ನಾರಾಯಣ, ಕಲ್ಮಂಜ ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ಕಲ್ಮಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಸಾಲ್ಯಾನ್, ಬೆಳ್ತಂಗಡಿ ಬಿ.ಆರ್.ಸಿ ಸಮನ್ವಯಾಧಿಕಾರಿ ಬಿ. ಡಿ. ಬಸವ ಲಿಂಗಪ್ಪ, ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಎಂ., ಉಜಿರೆ ಸಂತ ಆಂಥೋನಿ ಚರ್ಚ್ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಭಾಗವಹಿಸಿದ್ದರು.

ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಸೇಸಪ್ಪ ಟಿ. ಕಂದೂರು, ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಚಿದಾನಂದ ಮ೦ಟಮೆ ಹಾಗೂ ಸರ್ವಸದಸ್ಯರು, ಮುಖ್ಯ ಶಿಕ್ಷಕಿ ಮಂಜುಳಾ ಜೆ.ಟಿ. ಹಾಗೂ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಹಮೀದ್ ಬಿ.ಎನ್. ಮತ್ತು ಸರ್ವಸದಸ್ಯರು, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭವಿತ್, ಶಾಲಾ ವಿದ್ಯಾರ್ಥಿ ನಾಯಕ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ದಾನಿಗಳಿಗೆ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಅಕ್ಷಯ ನಗರ ನಿರೂಪಿಸಿದರು. ವಿವಿಧ ಉಪ ಸಮಿತಿ ಸಂಚಾಲಕರು, ಸದಸ್ಯರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಸಹಕರಿಸಿದರು. ಶಿಕ್ಷಕಿ ಐಶ್ವರ್ಯ ವಂದಿಸಿದರು.









LEAVE A REPLY

Please enter your comment!
Please enter your name here