








ಮಚ್ಚಿನ: ಶ್ರೀ ವಿದ್ಯಾಸಾಗರ ಸಿ.ಬಿ.ಯಸ್.ಇ ಶಾಲೆಯಲ್ಲಿ ಮಕ್ಕಳ ಆಹಾರ ಮೇಳ ಡಿ. 28ರಂದು ನಡೆಯಿತು. ಮಕ್ಕಳ ಆಹಾರ ಮೇಳವನ್ನು ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಪುಷ್ಪಕ್ ಅವರು ಉದ್ಘಾಟಿಸಿದರು. ಈ ಆಹಾರ ಮೇಳದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಶಾಲೆಯ ಆವರಣದಲ್ಲಿ ವ್ಯಾಪಾರ ಮಾಡಿ ತಾವು ಮುಂದಿನ ಉದ್ಯಮಿಗಳೆಂದು ನಮ್ಮನ್ನು ಪರಿಗಣಿಸಿ ಎಂಬಂತೆ ಅವರು ವ್ಯವಹಾರ ತೋರ್ಪಡಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಮೇಳದಲ್ಲಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಊರರವರು ಭಾಗವಹಿಸಿದರು.
✍️ಹರ್ಷ ಬಳ್ಳಮಂಜ









