






ಬೆಳ್ತಂಗಡಿ: ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ವಾಣಿ “ಸ್ವ ಸಹಾಯ ಸಂಘಗಳ” ಉದ್ಘಾಟನೆಯನ್ನು ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಮಲವಂತಿಗೆ ಮತ್ತು ಮಿತ್ತಬಾಗಿಲು ಗ್ರಾಮದಲ್ಲಿ ದೀಪ ಪ್ರಜ್ವಲನ ಮೂಲಕ ಸಂಘ ದ ಪುಸ್ತಕ ಬಿಡುಗಡೆ ಮೂಲಕ ಸಂಘಕ್ಕೆ ಚಾಲನೆ ನೀಡಲಾಯಿತು.




ಗುಂಡೀರು ರವಿಚಂದ್ರ ಗೌಡ ಮತ್ತು ಆನಂದ ಗೌಡ ಮೈರ್ನೋಡಿ ಮನೆಯಲ್ಲಿ ನಡೆದ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಮಾಧವ ಗೌಡ ಬೆಳ್ತಂಗಡಿ ಭಾಗವಹಿಸಿ ಸಂಘದ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮಲವಂತಿಗೆ-ಮಿತ್ತಬಾಗಿಲು ಗ್ರಾಮದ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷರು ಹಾಗೂ ಸೋಮಂತ್ತಡ್ಕ ಶಾಖೆ ಯ ಸಲಹಾ ಸಮಿತಿಯ ನಿರ್ದೇಶಕ ಆನಂದ ಗೌಡ ಮೈರ್ನೋಡಿ, ಸಲಹಾ ಸಮಿತಿಯ ನಿರ್ದೇಶಕ ಜಯವರ್ಮ ಗೌಡ ಕಳ್ಬೇಟ್ಟು, ಬಂಗಾಡಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಶೀನಪ್ಪ ಗೌಡ ನೇತ್ರಕೊಡಂಗೆ, ರವಿಚಂದ್ರ ಗೌಡ ಗುಂಡೀರು ಹಾಗೂ 6 ಸ್ವ- ಸಹಾಯ ಸಂಘದ ಸಹಕಾರಿ ಬಂಧುಗಳು ಉಪಸ್ಥಿತರಿದ್ದರು.

ಈಗಾಗಲೇ ರಚನೆಯಾದ 6 ಸಂಘಗಳ ಸದಸ್ಯರುಗಳಿಗೆ ಸ್ವ ಸಹಾಯ ಸಂಘದ ನಿಯಮಾವಳಿ ಮತ್ತು ನಿಬಂಭನೆಗಳ ಬಗ್ಗೆ ವಾಣಿ- ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನಂಜಯ ಕುಮಾರ್ ಮಾಹಿತಿ ನೀಡಿದರು. ವಾಣಿ- ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಶಾಖಾ ಪ್ರಬಂಧಕ ಉಮೇಶ್ ಎಂ. ಅವರು ಕಾರ್ಯಕ್ರಮ ನಿರೂಪಿಸಿದರು.









