ಪಟ್ಟಣ ಪಂಚಾಯತ್ ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಸಮಗ್ರ ಅವಲೋಕನ-ಕೆ.ಆರ್.ಐ.ಡಿ.ಎಲ್ ಅಪೂರ್ಣ ಕಾಮಗಾರಿಯ ಸುದೀರ್ಘ ಚರ್ಚೆ-ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಪ.ಪಂಚಾಯತ್ ವ್ಯಾಪ್ತಿಯವರಿಗೆ ಮೊದಲು ಆದ್ಯತೆ ನೀಡಿ-ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ ಸೇವೆಗೆ ಸರಿಯಾಗಿ ಲಭ್ಯವಾಗುತ್ತಿಲ್ಲ

0

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಹಾಗೂ ಇಲಾಖಾ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಜ.2ರಂದು ಬೆಳ್ತಂಗಡಿ ಸಂತೆಕಟ್ಟೆ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಬಳಿಗೆ ತಾಲೂಕು ಆಡಳಿತ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಜನಸ್ಪಂದನ ಸಭೆ ನಡೆದಿದ್ದು ಡಿ.31ರಂದು ಯಶಸ್ವಿಯಾಗಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಪೂರ್ಣಗೊಂಡಿದೆ. ಈ ರೀತಿಯಾಗಿ ಜನಸ್ಪಂದನ ನಡೆದಿರುವುದು ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ. ಹಂತ ಹಂತಗಳಲ್ಲಿ ಮುಂದಿನ ದಿನಗಳಲ್ಲಿ ಜನರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಜರಾತಿ ತಂಬ್ ನೀಡಿ ಹೊರಟು ಹೋಗುತ್ತಾರೆ. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ಹೊರಟು ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿದಾಗ ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುವುದು ಹಾಗೂ ಎಲ್ಲಾ ಇಲಾಖೆಯಲ್ಲಿ ಚಲನವಲನದ ದಾಖಲಾತಿ ಪಾಲಿಸಬೇಕು ಎಂದು ಹೇಳಿದರು.

ಕೆ.ಆರ್.ಐ.ಡಿ.ಎಲ್ ಅಪೂರ್ಣ ಕಾಮಗಾರಿಯ ಬಗ್ಗೆ ಚರ್ಚೆ, ಕಲ್ಲಗುಡ್ಡೆಯ ನೀರಿನ ಟ್ಯಾಂಕ್ ಬಳಸಲು ಲಭ್ಯವಿಲ್ಲದ ಬಗ್ಗೆ, ಕಲ್ಲಗುಡ್ಡೆ ಟ್ರೀ ಪಾರ್ಕ್ ರಸ್ತೆ ಸಮಸ್ಯೆ ಬಗ್ಗೆ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಪ.ಪಂಚಾಯತ್ ವ್ಯಾಪ್ತಿಯವರಿಗೆ ಮೊದಲು ಆದ್ಯತೆ ನೀಡುವ ಬಗ್ಗೆ, ರಸ್ತೆ ಸಮಸ್ಯೆ ಬಗ್ಗೆ, ಪಟ್ಟಣ ಪಂಚಾಯತ್ ನ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ, ನಗರಕ್ಕೆ ಪ್ರತ್ಯೇಕ ಫೀಡರ್ ಒದಗಿಸುವ ಬಗ್ಗೆ, ಪಟ್ಟಣ ಪಂಚಾಯತ್ ಗೆ ಮಹಾಯೋಜನೆ ಜಾರಿಯ ರಸ್ತೆ ನಿಯಮದ ಬಗ್ಗೆ, ಕಾಡುಪ್ರಾಣಿಗಳ ಹಾಗೂ ಬೀದಿನಾಯಿಯ ಉಪಟಳದ ಬಗ್ಗೆ, ಅಂಬೇಡ್ಕರ್ ಭವನದ ಬಳಿ ರಾತ್ರಿ ಹೊತ್ತು ಮದ್ಯಪಾನ ಮಾಡುವವರ ಹಾವಳಿಗೆ ಸರಿಯಾದ ಕ್ರಮದ ಬಗ್ಗೆ, ಫಾರ್ಮ್ 3 ತಿದ್ದುಪಡಿಯ ಗೊಂದಲದ ಬಗ್ಗೆ ಶಾಸಕರ ನೇತೃತ್ವದಲ್ಲಿ ಚರ್ಚಿಸಲಾಯಿತು.

ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕ‌ರ್, ಮುಖ್ಯಾಧಿಕಾರಿ ರಾಜೇಶ್ ಕೆ., ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಗಳಿ ನಾರಾಯಣ ರಾವ್, ಇಲಾಖಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here