






ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ ನಲ್ಲಿ ಹೊಸವರ್ಷ ಸಂಭ್ರಮಾಚರಣೆ, ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ-ನೆರೆಕರೆಯ ಗ್ರಾಮಸ್ಥರಿಂದ 13ನೇ ವರ್ಷದ ಸ್ನೇಹಭೋಜನ ಕಾರ್ಯಕ್ರಮವನ್ನು ಜ. 1ರಂದು ಆಚರಿಸಲಾಯಿತು.

ಅನುಗ್ರಹ ಮೆಲೋಡಿಯಸ್ ಕಕ್ಕಿಂಜೆ ತಂಡದವರಿಂದ ಗಾನ ಸಂಗೀತ ಕಾರ್ಯಕ್ರಮ ಸುಗಮವಾಗಿ ನೆರವೇರಿತು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ಸಿ.ಪೌಲೋಸ್ ರವರು ಹೊಸ ವರ್ಷಕ್ಕೆ ಶುಭಾಶಯಗಳನ್ನು ಹಾರೈಸಿದರು.




ಸಿಯೋನ್ ಆಶ್ರಮ ನಿವಾಸಿಗಳಿಗೋಸ್ಕರ ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ ನೆರೆಕರೆಯ ಗ್ರಾಮಸ್ಥರು ಪ್ರತೀ ವರ್ಷ ಜನವರಿ ಒಂದರಂದು ಒಂದು ದಿನದ ಅನ್ನದಾನ ನೀಡುತ್ತಿದ್ದು, ಈ ಕಾರ್ಯಕ್ರಮದ ಮುಂದಾಳತ್ವವನ್ನು ಸಂಸ್ಥೆಯ ಹಿತೈಷಿಗಳಾದ ಜೋಸೆಫ್ ಪರುವಕಾರನ್ ಮತ್ತು ಡೆನ್ನಿಯವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟೀ ಸದಸ್ಯರು, ಕುಟುಂಬಸ್ಥರು, ಸಿಬ್ಬಂದಿ ವರ್ಗದವರು, ಆಶ್ರಮ ನಿವಾಸಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು.









