






ಬೆಳ್ತಂಗಡಿ: ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆ, Desluge ನಿರ್ವಾಹಕರೊಂದಿಗೆ ಒಪ್ಪಂದ ಹಾಗೂ pupu Pump ಕಾರ್ಯಾಚರಣೆ ಕುರಿತ ಒಂದು ದಿನದ ಕಾರ್ಯಾಗಾರವು CDD ಇಂಡಿಯಾ, ಬೆಂಗಳೂರು ಸಹಯೋಗದೊಂದಿಗೆ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.


ಬೆಂಗಳೂರು CDD ಇಂಡಿಯಾದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕಿ ರೋಹಿಣಿ ಪ್ರದೀಪ್ ಹಾಗೂ ತಂಡದವರು ತರಬೇತಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ನೋಡಲ್ ಅಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕಾರ್ಯನಿರ್ವಾಹಕ ಅಭಿಯಂತರರು ಜೈ ಪ್ರಕಾಶ್, ಪುತ್ತೂರು ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ವಾಹಕ, ಪಂಚಾಯತ್ ಕಾರ್ಯ ಅಧಿಕಾರಿ ನವೀನ್ ಭಂಡಾರಿ, ಬಂಟ್ವಾಳ ತಾಲೂಕು ನಿರ್ವಾಹಕ ಪಂಚಾಯತ್ ಕಾರ್ಯ ಅಧಿಕಾರಿ ಸಚಿನ್ ಕುಮಾರ್, ಮಂಗಳೂರು ತಾಲೂಕು ನಿರ್ವಾಹಕ ಪಂಚಾಯತ್ ಕಾರ್ಯ ಅಧಿಕಾರಿ ಮಹೇಶ್ ಹೊಳ್ಳ, ಮೂಡಬಿದಿರೆ ಮುಲ್ಕಿ ಪ. ತಾಲೂಕು ನಿರ್ವಾಹಕ, ಪಂಚಾಯತ್ ಕಾರ್ಯ ಅಧಿಕಾರಿ ಕುಮಾಧರ ಬಿ., ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ, ಗೋಳ್ತಮಜಲು ಪಿಡಿಒ ಸುನೀಲ್ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಆಭಿಯಂತರರು, ಸ್ವಚ್ಛ ಭಾರತ್ ಜಿಲ್ಲಾ ಸಮಾಲೋಚಕರು ಉಪಸ್ಥಿತರಿದ್ದರು.









