









ಮಚ್ಚಿನ: ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ವಿಶೇಷ ಚೇತನರ ಫಲಾನುಭವಿಗಳಿಗೆ ಸಿಂಟೆಕ್ಸ್ ಮತ್ತು ವೀಲ್ ಚೇರ್ ವಿತರಣೆ ನಡೆಯಿತು. ಗ್ರಾಮ ಪಂಚಾಯಿತಿನಲ್ಲಿ 2025 -26ನೇ ಸಾಲಿನಲ್ಲಿ ವಿಶೇಷ ಚೇತನರ ದಿನಾಚರಣೆಯ ಪ್ರಯುಕ್ತ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತು. ನಂತರ 2025- 26 ನೇ ಸಾಲಿನ ವಿಶೇಷ ಚೇತನರಿಗೆ ವೀಲ್ ಚೇರ್ ಮತ್ತು ನೀರಿನ ಸಿಂಟೆಕ್ಸ್ ವಿತರಿಸಲಾಯಿತು. ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀರಿನ ಸಿಂಟೆಕ್ಸ್ ವಿತರಿಸಲಾಯಿತು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷೆ ಸೋಮಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ಮತ್ತು ಸರ್ವ ಸದಸ್ಯರು ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
✍️ಹರ್ಷ ಬಳ್ಳಮಂಜ









