






ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರದ ಕೇಂದ್ರ ಕಚೇರಿ ಬೆಳ್ತಂಗಡಿ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಶ್ರೀ ಗುರು ಸಭಾಂಗಣದಲ್ಲಿ ಸಂಘದ ಅಭಿವೃದ್ಧಿಗೆ ಕಾರಣೀಕರ್ತರಾದ ಸದಸ್ಯರು ಮತ್ತು ಗ್ರಾಹಕ ಭಾಂಧವರ ಸಮ್ಮಿಲನ ಕಾರ್ಯಕ್ರಮ, ನಡೆದು ಬಂದ ಹಾದಿಯ ಮೆಲುಕು “ಹೆಜ್ಜೆಗುರುತು” ಸಂಸ್ಥೆಯ ಪ್ರಗತಿ ಪಥದಲ್ಲಿ ಹಿಂದಿನ ಪ್ರತಿ ಹೆಜ್ಜೆ ಗಳ ಒಂದು ನೋಟ ಕಾರ್ಯಕ್ರಮ ಡಿ. 27ರಂದು ನಡೆಯಿತು. ಸಂಘದ ಅಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಡೆಯಿತು. ಸಂಘದ ಉಪಾಧ್ಯಕ್ಷ ಜಗದೀಶಚಂದ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ತನುಜಾ ಶೇಖರ್, ಚಂದ್ರಶೇಖರ್, ಗಂಗಾಧರ ಮಿತ್ತಮಾರು, ಚಿದಾನಂದ ಪೂಜಾರಿ ಎಲ್ದಕ್ಕ, ಸೂರಜ್ ಕುಮಾರ್, ಧರಣೇಂದ್ರ ಕುಮಾರ್, ವಿಶೇಷಾಧಿಕಾರಿ ಎಂ. ಮೋನಪ್ಪ ಪೂಜಾರಿ ಕಂಡೆತ್ಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಅಶ್ವಥ್ ಕುಮಾರ್ ಹೆಜ್ಜೆ ಗುರುತು ಕಾರ್ಯಕ್ರಮದ ಕುರಿತು ವಿವರ ನೀಡಿದರು. ಗ್ರಾಹಕರು, ವಿವಿಧ ಶಾಖೆಯ ಮೆನೇಜರ್, ಸಿಬ್ಬಂದಿ ಹಾಜರಿದ್ದು ಸಹಕರಿಸಿದರು.









