ಉರುವಾಲು: ಕಾರಿಂಜ ಶ್ರೀ ವನಶಾಸ್ತಾರ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

0

ಉರುವಾಲು: ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ದೇವಸ್ಥಾನ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದ ಸಭೆಯನ್ನು ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ ಇವರ ನೇತೃತ್ವದಲ್ಲಿ ಡಿ.25ರಂದು ನಡೆಯಿತು.

ಸಭೆಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಬ್ರಹ್ಮಕಲಶೋತ್ಸವದ ಕಾರ್ಯಧ್ಯಕ್ಷರಾದ ಸುನಿಲ್ ಗೌಡ ಅಣವು, ಜೀರ್ಣೋದ್ದಾರ ಸಮಿತಿ ಕಾರ್ಯಧ್ಯಕ್ಷ ವಿಜಯ್ ಕುಮಾರ್ ಕಲ್ಲಲಿಕೆ, ಹೊರಕಾಣಿಕೆ ಸಂಚಾಲಕ ಪ್ರಭಾಕರ ಪೊಸಂದೋಡಿ, ಸ್ವಾಗತ ಸಮಿತಿ ಸಂಚಾಲಕ ರೋಹಿತ್ ಶೆಟ್ಟಿ ಕುಪ್ಪೆಟ್ಟಿ, ಸೀತಾರಾಮ ಆಳ್ವ ಕೊರಿಂಜ, ಚಿದಾನಂದ ನಾಯ್ಕ ಕುಪ್ಪೆಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಪ್ರಮುಖರು ಭಾಗವಹಿಸಿ ಬ್ರಹ್ಮ ಕಲಶೋತ್ಸವದ ಕಾರ್ಯಕ್ರಮಗಳ ಮತ್ತು ಜೀರ್ಣೋದ್ದಾರದ ಬಗ್ಗೆ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here